ಕಲಾವಿದರಿಗೆ ನೇರವಾದ ಕಲಾತಂಡ-ವಿಠ್ಠಲ ಕೊಪ್ಪದ

ಕಲಾವಿದರಿಗೆ ನೇರವಾದ ಕಲಾತಂಡ-ವಿಠ್ಠಲ ಕೊಪ್ಪದ

ಧಾರವಾಡ: ಕೋವಿಡ್-೧೯ ಎರಡನೇ ಅಲೆ ಎಲ್ಲ ದುಡಿಯುವ ವರ್ಗವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಪೂರ್ಣಪ್ರಮಾಣದಲ್ಲಿ ಕಲೆಯನ್ನೆ ವೃತ್ತಿಯನ್ನಾಗಿ ಸ್ವೀಕರಿಸದವರ ಬಾಳು ನರಕ ಯಾತನೆಯೇ ಸರಿ. ಎರಡನೆ ಅಲೆಯ ಹೊಡೆತಕ್ಕೆ ಕಲಾವಿದರು ತತ್ತರಿಸಿ ಹೋಗಿದ್ದಾರೆ. ದಿನದ ದಿನಸಿ, ಮನೆ ಬಾಡಿಗೆ, ಆಸ್ಪತ್ರ-ಔಷಧಿ ಖರ್ಚು ಹಾಗೂ ಸಾವುಗಳು ಹೀಗೆ ಕಲಾವಿದರ ಬದಕು ದಿಕ್ಕೆಟ್ಟು ಹೋಗಿದೆ.
ಹಾವಳಿ ಕಡಿಮೆ ಆದರೂ ಉಳಿದ ವೃತ್ತಿಗಳು ಬೇಗನೆ ಸುಧಾರಿಸಿಕೊಳ್ಳಬಹುದು ಆದರೆ ಸಾಂಸ್ಕೃತಿಕ ವಲಯಕ್ಕೆ ಧೀರ್ಘ ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಸಾಹಿತಿಗಳಾದ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ಧಾರವಾಡದಲ್ಲಿ ರಂಗಪರಿಸರ ತನ್ನದೆಯಾದ ಅಸ್ತಿತ್ವದಿಂದ ನಿರಂತರವಾಗಿ ರಂಗಭೂಮಿ ಸೇವೆ ಮಾಡುತ್ತಾ ಬಂದಿದೆ. ಇದರ ಜೊತೆಗೆ ರಂಗದಲ್ಲಿ ತೊಡಗಿಕೊಂಡವರ ಆರೋಗ್ಯ, ಜೀವನ ನಿರ್ವಹಣೆಯ ಕುರಿತು ಸದಾ ಕಾಳಜಿ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದು ಹೇಳಿದರು. ಹಿರಿಯ ಸಾಹಿತಿಗಳಾದ ಡಾ.ಬಾಳಣ್ಣ ಶಿಗಿಹಳ್ಳಿ, ಕೆ.ಚ್.ನಾಯಕ ದೂರವಾಣಿಯ ಮೂಲಕ ಕಲಾವಿದರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು. ಅಲ್ಲದೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿAದ ಮಾಸ್ಕ,ಸ್ಯಾನಿಟೈಜರಗಳನ್ನು ರೆಡ್ ಕ್ರಾಸ್ ಸಭಾಪತಿ ಮತ್ತು ಮಕ್ಕಳತಜ್ಞರಾದ ಡಾ ಕವನ ದೇಶಪಾಂಡೆ ವಿತರಿಸಿದರು.
ಹೊಂಗೀರಣ ಫೌಂಡೇಷನ್ ಅಧ್ಯಕ್ಷರಾದ ರಾಜಕುಮಾರ ಜಿಂಗಾಡೆ ಮಾತನಾಡಿ ರಂಗಪರಿಸರದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು


ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಯಲಿಗಾರ, ರಂಗಪರಿಸರದ ಕಾರ್ಯದರ್ಶಿ ಚಂದ್ರಶೇಖರ ಜಿಗಜಿನ್ನಿ, ಶಿವಾನಂದ ಗಬ್ಬೂರ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕೋಶಾಧ್ಯಕ್ಷರಾದ ಪ್ರೇಮಾನಂದ ಶಿಂಧೆ, ಹಾವೇರಿಯ ಕಲಾ ಸ್ಪಂದನದ ಕಾರ್ಯದರ್ಶಿ ಮಂಜುನಾಥ ಎಮ್ ಕೆ, ಕಲಾ ಸಂಗಮದ ಅಧ್ಯಕ್ಷರಾದ ಪ್ರಭು ಹಂಚಿನಾಳ ಇದ್ದರು. ಚಂದ್ರಸ್ಪೂರ್ತಿ ಸಾಂಸ್ಕೃತಿಕ ಕಲಾ ಸೇವಾ ತಂಡ, ಶ್ರೀ ಸಿದ್ದಾರ್ಥ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ, ಕಲಾಸಂಗಮ(ರಿ) ಸಂಸ್ಥೆ, ಸಮುದಾಯ, ಸ್ನೇಹಿತರು ಕಲಾವಿದರು, ಆಟ ಮಾಟ, ಗೊಂಬೆ ಮನೆ, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಟಾನ, ರಂಗ ಪಯಣ, ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ, ರಂಗ ಪರಿಸರ,ಸಂತತ, ರಂಗಸAಗ ಹೀಗೆ ರಂಗಭೂಮಿಯಲ್ಲಿ ತೊಡಗಿಕೊಂಡ ಧಾರವಾಡದ ೧೬ ತಂಡಗಳಿAದ ೫೦ ಕಲಾವಿದರಿಗೆ ಒಂದುವಾರಕ್ಕೆ ಆಗುವಷ್ಟು ಆಹಾರದ ಸಾಮಗ್ರಿಗಳನ್ನು ಅವರ ಜೀವನ ನಿರ್ವಹಣೆಗಾಗಿ ವಿತರಿಸಲಾಯಿತು.