ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಅಭಿಮಾನ; ಅಮಿತ್‌ ಶಾ, ಪ್ರಧಾನಿ ಮಂತ್ರಿ ಕಂಡ್ರೆ ಡಿಕೆಶಿಗೆ ಭಯ; ಆರ್‌ .ಅಶೋಕ್‌

ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಅಭಿಮಾನ; ಅಮಿತ್‌ ಶಾ, ಪ್ರಧಾನಿ ಮಂತ್ರಿ ಕಂಡ್ರೆ ಡಿಕೆಶಿಗೆ ಭಯ; ಆರ್‌ .ಅಶೋಕ್‌

ಚಿಕ್ಕಬಳ್ಳಾಪುರ: ಕರ್ನಾಟಕ ಸರ್ಕಾರದ ಬಗ್ಗೆ ಮೋದಿಗೆ ಗೌರವ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಮತ್ತು ಅಮಿತ್‌ ಶಾ ಕಂಡರೆ ಡಿ.ಕೆ ಶಿವಕುಮಾರ್‌ ಗೆ ಭಯ ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಬಹಳ ಮುಖ್ಯವಾಗಿದೆ.

ಹೀಗಾಗಿ ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕವಾಗಿದ್ದು, ಕರ್ನಾಟಕದ ಬಗ್ಗೆ ಮೋದಿಯವರಿಗೆ ಹೆಚ್ಚು ಪ್ರೀತಿ ಅಭಿಮಾನ ಇದೆ ಎಂದರು.
ಅತಿವೃಷ್ಠಿ ಆದಾಗ ಅತಿ ಹೆಚ್ಚು ಪರಿಹಾರದ ಹಣ ಕೇಂದ್ರ ಸರ್ಕಾರ ನೀಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 1 ವರ್ಷ ಕಾಯಿಸ್ತಿದ್ದರು. ಈಗ 1 ತಿಂಗಳಲ್ಲಿ ಪರಿಹಾರ ಕೊಡುತ್ತಿದ್ದಾರೆ.
ಇದಕ್ಕೆ ಕಾರಣ ಮೋದಿಯಾಗಿದ್ದಾರೆ. ರೈಲ್ವೆ, ಹೈವೇ, ನೀರಾವರಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ ಕ್ಲಿಯರೆನ್ಸ್ ಕೂಡ ಕೊಟ್ಟಿದ್ದಾರೆ. ಕಾಂಗ್ರೆಸ್ ಇದ್ದಾಗ ಯಾಕೆ ಕೊಡಲಿಲ್ಲ ಪ್ರಶ್ನಿಸಿದ ಅವರು, ಮನಮೋಹನ್ ಸಿಂಗ್ ಪ್ರಧಾನಿ ಆದಾಗ ಮೇಕೆದಾಟು, ಮಹದಾಯಿ ಜ್ಞಾಪಕ ಬರಲಿಲ್ಲ ಎಂದು ಟಾಂಗ್ ನೀಡಿದರು.