ಕರ್ನಾಟಕದ ಜನರಿಗೆ ಸದ್ದಿಲ್ಲದೇ ಮತ್ತೆ ಕರೆಂಟ್ ಶಾಕ್​: ಸಾಮಾನ್ಯರ ಜೇಬಿಗೆ ಕತ್ತರಿ ಫಿಕ್ಸ್..!?

ಕರ್ನಾಟಕದ ಜನರಿಗೆ ಸದ್ದಿಲ್ಲದೇ ಮತ್ತೆ ಕರೆಂಟ್ ಶಾಕ್​: ಸಾಮಾನ್ಯರ ಜೇಬಿಗೆ ಕತ್ತರಿ ಫಿಕ್ಸ್..!?

ಬೆಂಗಳೂರು : ಕಳೆದ ಹಲವು ದಿನಗಳಿಂದ ಬೆಲೆ ಏರಿಕೆಗೆ ತತ್ತರಿಸಿದ್ದ ಜನರಿಗೆ ಇದೀಗ ಮತ್ತೊಂದು ಶಾಕ್‌ ಎದುರಾಗಿದ್ದು, ವಿದ್ಯುತ್ ದರದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ

ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಫೆಬ್ರವರಿ 13 ರಿಂದ ಮಾರ್ಚ್ 1ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದೆ. ಮೊನ್ನೆಯಷ್ಟೇ ವಿದ್ಯುತ್​​ ದರ ಏರಿಕೆ ಬೆನ್ನಲ್ಲೇ ಇದಿಗ ಮತ್ತೆ ವಿದ್ಯುತ್‌ ಬಿಲ್‌ ದರ ಏರಿಕೆಯಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಪ್ರತಿನಿತ್ಯ ಹಣ ದುಬ್ಬರ ಹೆಚ್ಚಳಕ್ಕೆ ಹೋಟೆಲ್​ ಉದ್ಯಮಗಳು ಭಾರೀ ವಿರೋಧ ವ್ಯಕ್ತಪಡಿಸಿದಲ್ಲದೇ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಇದೊಂದು ಅವೈಜ್ಞಾನಿಕ‌ ನಿರ್ಣಯ. ಗ್ರಾಹಕರ ಮೇಲೆ ಹೊರೆ ಹಾಕೋದು ಸಮಂಜಸವಲ್ಲ ಎಂದು ಕಿಡಿಕಾರಿದ್ದಾರೆ. ದಿನಾಸಿ ವಸ್ತುಗಳು, ವಿದ್ಯುತ್​​ ದರ , ಹೊಟೆಲ್‌ ದರ, ಒಂದಲ್ಲ ಒಂದು ಹೊಡೆತ ಜನರ ಬೇಬಿನ ಮೇಲೆ ತಟ್ಟುವಂತಾಗಿದೆ. ಜನ ಜೀವನವೇ ಸಂಕಷ್ಟಕ್ಕೆ ಸಿಲುಕಿವಂತಹ ಪರಿಸ್ಥಿತಿ ನಿರ್ಮಾಣವಾಗಿದಂತೂ ನಿಜ.