ಕರ್ನಾಟಕದಲ್ಲಿ ಚರ್ಮಗಂಟು ರೋಗ ಭೀತಿ : ರಾಮನಗರ ಕೆಂಗಲ್ ದನಗಳ ಜಾತ್ರೆ ರದ್ದು : ಜಿಲ್ಲಾಡಳಿತ ಆದೇಶ

ಕರ್ನಾಟಕದಲ್ಲಿ ಚರ್ಮಗಂಟು ರೋಗ ಭೀತಿ : ರಾಮನಗರ ಕೆಂಗಲ್ ದನಗಳ ಜಾತ್ರೆ ರದ್ದು : ಜಿಲ್ಲಾಡಳಿತ ಆದೇಶ

ರಾಮನಗರ : ಚರ್ಮಗಂಟು ರೋಗ ಭೀತಿಯಿಂದಾಗಿ ಸುಗ್ಗಿಯ ಮೊದಲ ರಾಸುಗಳ ಜಾತ್ರೆ ಎಂದು ಪ್ರಖ್ಯಾತಿ ಪಡೆದ ಕೆಂಗಲ್ ದನಗಳ ಜಾತ್ರೆ ರದ್ದುಗೊಳಿಸಿ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಈಗಾಗಲೇ ಜಿಲ್ಲೆಯಾದ್ಯಂತ ರಾಸುಗಳ ಚರ್ಮಗಂಟು ರೋಗ ಬಾಧೆ ಹೆಚ್ಚಾಗಿದ್ದು, ಜಾನುವಾರುಗಳಲ್ಲಿ ಈ ರೋಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 19ರ ವರೆಗೆ ಜಾನುವಾರುಗಳ ಜಾತ್ರೆ, ದನಗಳ ಸಂತೆ ಹಾಗೂ ನೆರೆ ರಾಜ್ಯಗಳಿಂದ ಒಳಗೆ ಅಥವಾ ಹೊರಗೆ ಜಾನುವಾರುಗಳ ಸಾಗಾಣಿಕೆಯನ್ನು ಸಹ ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಕಾಣಿಸಿಕೊಂಡ ಕೊರೊನಾದಿಂದ ಜಾತ್ರೆ ನಡೆದಿರಲಿಲ್ಲ. ಈ ಭಾರೀಯೂ ಕೆಂಗಲ್ ದೇವಾಲಯದ ಬಳಿ ದನಗಳ ಜಾತ್ರೆ ರದ್ದುಗೊಳಿಸಲಾಗಿದ್ದು ಜಾತ್ರೆಯಲ್ಲಿ ರಾಸುಗಳ ಮಾರಾಟ, ಖರೀದಿಯ ಭರಾಟೆ ತಪ್ಪಿದೆ ಎಂದು ಗ್ರಾಮಸ್ಥರು ಹಾಗೂ ರೈತರು ಬೇಸರಗೊಂಡಿದ್ದಾರೆ.