ಕಂಠಪೂರ್ತಿ ಕುಡಿದು ಬಿಲ್‌ ಬೋರ್ಡ್‌ಗೆ ಜೋತುಬಿದ್ದ ವ್ಯಕ್ತಿಯ ರಕ್ಷಣೆಗೆ ಜನರ ಹರಸಾಹಸ

ಕಂಠಪೂರ್ತಿ ಕುಡಿದು ಬಿಲ್‌ ಬೋರ್ಡ್‌ಗೆ ಜೋತುಬಿದ್ದ ವ್ಯಕ್ತಿಯ ರಕ್ಷಣೆಗೆ ಜನರ ಹರಸಾಹಸ

ಸಿದ್ದಿಪೇಟ್(ತೆಲಂಗಾಣ): ತೆಲಂಗಾಣದ ಸಿದ್ದಿಪೇಟ್‌ನಲ್ಲಿ ವ್ಯಕ್ತಿಯೋರ್ವನ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋದಲ್ಲಿ, ವ್ಯಕ್ತಿಯು ಬಿಲ್‌ ಬೋರ್ಡ್‌ಗೆ ಜೋತುಬಿದ್ದಿದ್ದಾನೆ.

ಈತನ್ನನ್ನು ರಕ್ಷಿಸಲು ಅಲ್ಲಿನ ಜನರು ಅನೇಕ ಹರಸಾಹಸ ಮಾಡಿದ್ದಾರೆ. ಇದರಿಂದ ಸಿದ್ದಿಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.