ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಐವರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು, ರಾಜ್ಯ ಗುಪ್ತಚರ ಇಲಾಖೆಯ ಆರ್.ಚೇತನ್, ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಬೆಂಗಳೂರು ಸಿಸಿಬಿಯ ಎಐಜಿಪಿ ಶಿವಪ್ರಕಾಶ್ ದೇವರಾಜ್, ಕಾನೂನು ಸುವ್ಯವಸ್ಥೆಯ ಮೈಸೂರು ಡಿಸಿಪಿ, ಎಂ.ಮುತ್ತುರಾಜ್, ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಬ್ ನೇಮಗೌಡ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.