ಎ. 7ರಂದು ಜೆಡಿಎಸ್‌ ಸೇರ್ಪಡೆ: ಮನೋಹರ ತಹಶೀಲ್ದಾರ್‌

ಎ. 7ರಂದು ಜೆಡಿಎಸ್‌ ಸೇರ್ಪಡೆ: ಮನೋಹರ ತಹಶೀಲ್ದಾರ್‌

ಹಾನಗಲ್ಲ: ಜೆಡಿಎಸ್‌ ಪಕ್ಷದ ಪಂಚರತ್ನ ರಥಯಾತ್ರೆ ಎ. 7ರಂದು ಹಾನಗಲ್ಲಿಗೆ ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುತ್ತೇನೆಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾನು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಗೊಳ್ಳುವುದಾಗಿ ಪ್ರಕಟಿಸಿದ ಮೇಲೆ ಕಾಂಗ್ರೆಸ್‌ ವರಿಷ್ಠರು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಕಾಂಗ್ರೆಸ್‌ನಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಮನನೊಂದು ಹೊರಗಡೆ ಬಂದಿದ್ದೇನೆ ಎಂದರು.