ಇಂದು ಸರಳ 'ಪೊಲೀಸ್ ಧ್ವಜ' ದಿನಾಚರಣೆ : ಪ್ರಶಸ್ತಿ ಪುರಸ್ಕೃತರಿಗಿಲ್ಲ ಸನ್ಮಾನ

ಇಂದು ಸರಳ 'ಪೊಲೀಸ್ ಧ್ವಜ' ದಿನಾಚರಣೆ : ಪ್ರಶಸ್ತಿ ಪುರಸ್ಕೃತರಿಗಿಲ್ಲ ಸನ್ಮಾನ

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಪೊಲೀಸ್ ಪದಕವನ್ನು ( Chief Minister Police Medal ) ಘೋಷಣೆ ಮಾಡಲಾಗಿತ್ತು. ಈ ಪ್ರಶಸ್ತಿಗಳನ್ನು ಪೊಲೀಸ್ ಧ್ವಜ ದಿನಾಚರಣೆಯಂದು ಮುಖ್ಯಮಂತ್ರಿ ಪದಕ ಪ್ರದಾನ ಮಾಡುವುದಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.

ಆದ್ರೇ ಪೊಲೀಸ್ ಧ್ವಜ ದಿನಾಚರಣೆಗೆ ಅವಕಾಶ ನೀಡಿದೆ.

ಈ ಸಂಬಂಧ ಅಪರ ಮುಖ್ಯ ಚುನಾವಣಾಧಿಕಾರಿ ಆರ್ ವೆಂಕಟೇಶ್ ಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ದಿನಾಂಕ 02-04-2023ರಂದು ಮುಖ್ಯ ಕಾರ್ಯದರ್ಶಿಯವರ ಉಪಸ್ಥಿತಿಯಲ್ಲಿ ಪೊಲೀಸ್ ಧ್ವಜ ದಿನದ ಪಥ ಸಂಚಲನವನ್ನು ನಡೆಸಲು ಹಾಗೂ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭವನ್ನು ನಡೆಸಲು ಅನುಮತಿ ಕೋರಿರೋದಾಗಿ ಹೇಳಿದ್ದಾರೆ.

ಕೇವಲ ಅಧಿಕಾರಿಗಳನ್ನು ಒಳಗೊಂಡಂತೆ ಅನಗತ್ಯ ಪ್ರಚಾರ ನೀಡದೇ ಸರಳವಾಗಿ ಯಾವುದೇ ಪ್ರಶಸ್ತಿಗಳನ್ನು ನೀಡದೇ ಪೊಲೀಸ್ ಧ್ವಜ ದಿನಾಚರಣೆಯನ್ನು ದಿನಾಂಕ 02-04-2023ರಂದು ಆಚರಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.