ಅವಧಿ ಮೀರಿ ಕಾರ್ಯಕ್ರಮ: ಬಿಎಲ್ ಸಂತೋಷ್ ಭಾಷಣಕ್ಕೆ ಪೊಲೀಸರು ಬ್ರೇಕ್

ಅವಧಿ ಮೀರಿ ಕಾರ್ಯಕ್ರಮ: ಬಿಎಲ್ ಸಂತೋಷ್ ಭಾಷಣಕ್ಕೆ ಪೊಲೀಸರು ಬ್ರೇಕ್

ಕೊಪ್ಪಳ: ಜಿಲ್ಲೆಯ ಗಂಗಾವಧಿಯಲ್ಲಿನ ಕಾರ್ಯಕ್ರಮವೊಂದರಲ್ಲಿ, ಪೊಲೀಸರು ನೀಡಿದ್ದಂತ ಅವಧಿಯನ್ನು ಮೀರಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವೇಳೆ ಮಧ್ಯಪ್ರವೇಶಿಸಿದಂತ ಪೊಲೀಸರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಸ್ ಸಂತೋಷ್ ಭಾಷಣಕ್ಕೆ ಬ್ರೇಕ್ ಹಾಕಿದ್ದಾರೆ.

ಗಂಗಾವತಿ ತಾಲೂಕಿನ ಮರಳಿ ಗ್ರಾಮದ ರಾಯಲ್ ರಿಚ್ ಕೌಂಟಿ ಹೋಟೆಲ್ ನಲ್ಲಿ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನವನ್ನು ಬಿಜೆಪಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಸಂತೋಷ್ ಕೂಡ ಭಾಗಿಯಾಗಿದ್ದರು.

ಬಿಜೆಪಿಯ ಈ ಕಾರ್ಯಕ್ರಮಕ್ಕೆ ಪೊಲೀಸರು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ನೀಡಿದ್ದರು. ಚುನಾವಣಾ ಅಧಿಕಾರಿಯಗಳಿಂದಲೂ ಇದೇ ಅವಧಿಯವರೆಗೆ ಅನುಮತಿ ಪಡೆಯಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ 700ಕ್ಕೂ ಹೆಚ್ಚು ಬಿಜೆಪಿ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಉದ್ಘಾಟನೆಯ ಬಳಿಕ, ಎರಡು ಅವಧಿಗೆ ಬಿ.ಎಲ್ ಸಂತೋಷ್ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆಯಲ್ಲಿ ಕಾರ್ಯಕ್ರಮಕ್ಕೆ ನೀಡಿದ್ದಂತ ಸಮಯಾವಕಾಶ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಪೊಲೀಸರು ಭಾಷಣ ನಿಲ್ಲಿಸುವಂತೆ ಬಿ.ಎಲ್ ಸಂತೋಷ್ ಗೆ ಸೂಚಸಿದ್ದಾರೆ.

ನಿಗದಿತ ಅವಧಿಗಿಂತ ಐದು ನಿಮಿಷ ಕಾರ್ಯಕ್ರಮ ಹೆಚ್ಚಾಗಿದ್ದಕ್ಕೆ ಪೊಲೀಸರು ಭಾಷಣ ನಿಲ್ಲುಸುವಂತೆ ಸೂಚಿಸಿದಾಗ, ನೋಟಿಸ್ ಕೊಟ್ಟರೇ ಹೆದರಿಸೋಣ ಎನ್ನುತ್ತಲೇ ಅರ್ಧಕ್ಕೆ ತಮ್ಮ ಮಾತನ್ನು ಮೊಟಕುಗೊಳಿಸಿದ್ದಾರೆ.