ಅರುಣಾಚಲ ವಿಧಾನಸಭಾ ಚುನಾವಣೆಗೆ ಪ್ರಿಯಾಂಕ ಕಹಳೆ

ಅರುಣಾಚಲ ವಿಧಾನಸಭಾ ಚುನಾವಣೆಗೆ ಪ್ರಿಯಾಂಕ ಕಹಳೆ

ಚಂಡಿಘಡ, ಅ.೧೪- ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ’ಭಾರತ್ ಜೋಡೋ ಯಾತ್ರೆ’ಯಲ್ಲಿ ನಿರತರಾಗಿರುವ ನಡುವೆಯೇ ,ಸಹೋದರಿ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸಿದ್ದಾರೆ.
ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸೋಲನ್ ಪಟ್ಟದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸಹುಮ್ಮಸ್ಸು ತುಂಬಿಸಿದ್ದಾರೆ.ಸೋಲನ್ ಪಟ್ಟಣದಿಂದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದು, ಮತ್ತೆ ಮರಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ.ಪಕ್ಷದೊಳಗಿನ ಜಗಳದಿಂದ ಕಂಗಾಲಾಗಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ನೀಡಲು ಪ್ರಿಯಾಂಕ ಗಾಂಧಿ ಮುಂದಾಗಿದ್ದಾರೆ.ಧೀಮಂತ ನಾಯಕ ಆರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಇಲ್ಲದೆ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲು. ವರ್ಚಸ್ವಿ ನಾಯಕರಾಗಿದ್ದ ವೀರಭದ್ರ ಸಿಂಗ್ ಅವರು ಪಕ್ಷದ ಹೈಕಮಾಂಡ್‌ನ ಇಚ್ಛೆಗೆ ವಿರುದ್ಧವಾಗಿಯೂ ತಮ್ಮ ಹಿಂಬಾಲಕರನ್ನು ಒಟ್ಟಿಗೆ ಇಡಬಲ್ಲ ನಾಯಕರಾಗಿದ್ದರು. ಅಲ್ಲದೆ ಹಲವು ಬಾರಿ ಪಕ್ಷದ ಗೆಲುವಿಗೆ ಕಾರಣರಾಗಿದ್ದರು.ಒಳಜಗಳದ ನಡುವೆಯೇ ಮೂರು ವಿಧಾನಸಭೆ ಮತ್ತು ಒಂದು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದೆ.ವೀರಭದ್ರ ಸಿಂಗ್ ಅವರ ಜನಪ್ರಿಯತೆ ಪರಿಗಣಿಸಿ, ಮಂಡಿ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದ ನಂತರ ಹೈಕಮಾಂಡ್, ಪ್ರತಿಭಾ ಸಿಂಗ್ ಅವರಿಗೆ ಅಧಿಕಾರ ನೀಡಿದೆ. ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ನಡೆಸಿದೆ.