ಅಡಿಕೆ' ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಅಡಿಕೆಯಲ್ಲಿ 'ಕ್ಯಾನ್ಸರ್' ಕಾರಕ ಅಂಶಗಳು ಇಲ್ಲ

ಅಡಿಕೆ' ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಅಡಿಕೆಯಲ್ಲಿ 'ಕ್ಯಾನ್ಸರ್' ಕಾರಕ ಅಂಶಗಳು ಇಲ್ಲ

ಬೆಂಗಳೂರು : ಅಡಿಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ ಎಂದು ವರದಿ ಹೇಳಿದೆ.

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದು, ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ, ಔಷಧೀಯ ಗುಣವಿದೆ ಎಂದು ರಾಮಯ್ಯ ತಾಂತ್ರಿಕ ವಿವಿ ವರದಿ ನೀಡಿದೆ ಎಂದಿದ್ದಾರೆ.

1 ವರ್ಷದ ಹಿಂದೆಯೇ ಸಂಶೋಧನೆ ನಡೆಸಲು ರಾಮಯ್ಯ ತಾಂತ್ರಿಕ ವಿವಿಗೆ ಹೇಳಿದ್ದೆವು , ಇದೀಗ ರಾಮಯ್ಯ ತಾಂತ್ರಿಕ ವಿವಿ ವರದಿ ಸಲ್ಲಿಕೆ ಮಾಡಿದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ, ಔಷಧೀಯ ಗುಣವಿದೆ ಎಂದು ರಾಮಯ್ಯ ತಾಂತ್ರಿಕ ವಿವಿ ವರದಿ ನೀಡಿದೆ ಎಂದಿದ್ದಾರೆ. ಹಿಂದಿನ ಸರ್ಕಾರ ಅಡಕೆಯಲ್ಲಿ ಕ್ಯಾನರ್ ಇದೆ ಎಂದು ಹೇಳಿತ್ತು, ಇದೀಗ ಕೋರ್ಟ್ ನಲ್ಲಿ ಅದರ ವಿಚಾರಣೆ ನಡೆಯುತ್ತಿದೆ. ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.