ಹೊಡೆದು ಸಾಯಿಸಿದ ನಾಯಿಯನ್ನು ಕೆರೆಗೆ ಬಿಸಾಕಲು ಹೋಗುವಾಗ ಕಾಲು ಜಾರಿ ತಾನೇ ಬಿದ್ದು ಮೃತಪಟ್ಟ ಮಹಿಳೆ

ಲಕ್ನೋ: ನಾಯಿ ಕಚ್ಚಿದ ಕಾರಣಕ್ಕೆ ಮಹಿಳೆಯೊಬ್ಬರು ನಾಯಿಯನ್ನೇ ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರೂಬಿ ಎಂದು ಗುರುತಿಸಲಾಗಿದೆ.
ರೂಬಿ ಅವರ ಮನೆಯ ನಾಯಿ ರೂಬಿ ಹಾಗೂ ಅವರ ಮಗುವನ್ನು ಕಚ್ಚಿದ ಕಾರಣಕ್ಕೆ ಸಿಟ್ಟಾಗಿ, ನಾಯಿಗೆ ಹೊಡೆದಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಇಲ್ಲದ ರೂಬಿ ಪತಿ, ಪತ್ನಿ ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲು ಹೋಗುವಾಗ ಕೆರೆಯ ಪಕ್ಕದಲ್ಲಿ ಪತ್ನಿಯ ಚಪ್ಪಲಿಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಕೆರೆಯಿಂದ ಮೇಲೆ ತೆಗೆದು ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿದೆ. ಘಟನೆ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.