ಹಾಸನ ಟಿಕೆಟ್ ಕಗ್ಗಂಟು : ಜೆಡಿಎಸ್ ವರಿಷ್ಟ H.D ದೇವೇಗೌಡ ಹೇಳಿದ್ದೇನು

ಹಾಸನ ಟಿಕೆಟ್ ಕಗ್ಗಂಟು : ಜೆಡಿಎಸ್ ವರಿಷ್ಟ H.D ದೇವೇಗೌಡ ಹೇಳಿದ್ದೇನು

ವದೆಹಲಿ : ಹಾಸನ JDS ಅಭ್ಯರ್ಥಿ ವಿಚಾರದಲ್ಲಿ ನಾವು ನಿರ್ಧಾರ ಮಾಡುತ್ತೇವೆ. JDS ಎಷ್ಟು ಸ್ಥಾನ ಪಡೆಯಲಿದೆ ಎಂದು ಮತದಾರರು ನಿರ್ಧರಿಸುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಚುನಾವಣೆಗೂ ಮೊದಲೇ ಮಾಜಿ ಸಿಎಂ ಹೆಚ್.ಡಿ.

ಕುಮಾರಸ್ವಾಮಿ 97 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಇನ್ನೂ ಬಿಜೆಪಿ ಒಂದು ಪಟ್ಟಿ ಕೂಡ ಬಿಡುಗಡೆ ಮಾಡಿಲ್ಲ ಎಂದರು. ಒಂದು ಪ್ರಾದೇಶಿಕ ಪಕ್ಷವನ್ನು ಕೊಲ್ಲಲ್ಲು ಯಾಕೆ ಇಷ್ಟು ಪ್ರಯತ್ನ. ಈ ಪ್ರಶ್ನೆಯನ್ನು ಕಾಂಗ್ರೆಸ್, ಬಿಜೆಪಿ ತಮಿಳುನಾಡಿನಲ್ಲಿ ಕೇಳಲಿ ಎಂದು ಕಿಡಿಕಾರಿದರು

.ವರುಣದಲ್ಲಿ ವಿಜಯೇಂದ್ರ ಸ್ಪರ್ಧೆ ಕುರಿತು ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನಾನೇನು ಹೇಳಲ್ಲ ಎಂದು ಹೇಳಿದರು.ವರುಣಾದಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ, ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಯಡಿಯೂರಪ್ಪ ನಿರ್ಧಾರವಾಗಿತ್ತು, ಕೊನೆಗೆ ಅವರೇ ಬೇಡ ಎಂದಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಜೆಪಿ ಹೈಕಮಾಂಡ್, ನಡ್ಡಾ, ಅಮಿತ್ ಶಾ ಇದ್ದಾರೆ. ಅವರು ಏನು ಹೇಳಿದ್ದಾರೆ ಗೊತ್ತಿಲ್ಲ, ನಾನು ಇದಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದರು.ಈ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಯಾರ ಜೊತೆನೂ ಮಾತನಾಡಿಲ್ಲ, ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ಏನೂ ಹೇಳಲ್ಲ ಎಂದು ದೇವೇಗೌಡ ಪ್ರತಿಕ್ರಿಯೆ ನೀಡಿದರು.