ಸ್ಯಾಂಟ್ರೋ ರವಿ ಜೈಲು ಸೇರುತ್ತಿದ್ದಂತೆ ಮೈಸೂರು ಜೈಲರ್​ ಸ್ಥಾನಪಲ್ಲಟ

ಸ್ಯಾಂಟ್ರೋ ರವಿ ಜೈಲು ಸೇರುತ್ತಿದ್ದಂತೆ ಮೈಸೂರು ಜೈಲರ್​ ಸ್ಥಾನಪಲ್ಲಟ

ಬೆಂಗಳೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಹೈಟೆಕ್​ ವೇಶ್ಯಾವಟಿಕೆ ದಂಧೆಯ ಪಿಂಪ್​… ಪೊಲೀಸ್​ ಅಧಿಕಾಗಳ ವರ್ಗಾವಣೆ ದಂಧೆಯ ಕಿಂಗ್​ಪಿನ್​ ಸ್ಯಾಂಟ್ರೋ ರವಿಯನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಆದರೆ, ಈತ ಮೈಸೂರು ಜೈಲಿಗೆ ಹೋಗುತ್ತಿದ್ದಂತೆ ಅತ್ತ ಜೈಲರ್ ಕೆಲಸಕ್ಕೆ ಗೈರಾಗಿದ್ದಾರೆ!

ಮೈಸೂರು ಕಾರಾಗೃಹ ಅಧೀಕ್ಷಕ ಮಹೇಶ್.ಎಸ್.ಜಿಗಣಿ ಅವರ ವರ್ಗಾವಣೆಯಲ್ಲಿ ಸ್ಯಾಂಟ್ರೋ ರವಿ ಕೈವಾಡವಿದೆ ಎಂಬುದು ಭಾರೀ ಸುದ್ದಿಯಾಗಿತ್ತು. ವರ್ಗಾವಣೆ ಮಾಡಿಸಿದನ್ನು ಸ್ಟೇಟಸ್‌ನಲ್ಲಿ ಸ್ಯಾಂಟ್ರೋ ರವಿ ಹಾಕಿಕೊಂಡಿದ್ದ. ಈ ಬಗ್ಗೆ 'ದಿಗ್ವಿಜಯ ನ್ಯೂಸ್'ನಲ್ಲಿ ವರದಿ ಪ್ರಸಾರ ಆಗಿತ್ತು. ಇದರ ಬೆನ್ನಲ್ಲೇ ಜೈಲರ್​ ಸ್ಥಾನಪಲ್ಲಟ ಆಗಿದೆ.

ನಿನ್ನೆ(ಜ.15) ಮಹೇಶ್​ ಅವರು ಕರ್ತವ್ಯಕ್ಕೆ ಗೈರಾಗಿದ್ದರು. ಇದೀಗ ಮೈಸೂರು ಜೈಲಿನಿಂದ ಬೆಂಗಳೂರಿಗೆ ರಾಜ್ಯ ಸರ್ಕಾರ ಕರೆಸಿಕೊಂಡಿದೆ. ಇಂದಿನಿಂದ ಬೆಂಗಳೂರಿನಲ್ಲಿ ಮಹೇಶ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.