ಸೊಲೊಮನ್ ದ್ವೀಪದಲ್ಲಿ 6.0 ತೀವ್ರತೆಯ ಭೂಕಂಪ

ಸೊಲೊಮನ್ ದ್ವೀಪದಲ್ಲಿ 6.0 ತೀವ್ರತೆಯ ಭೂಕಂಪ

ಲಂಗೊ (ಸೊಲೊಮನ್ ದ್ವೀಪ): ಮಂಗಳವಾರ ಮುಂಜಾನೆ ಸೊಲೊಮನ್ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ʻಮಂಗಳವಾರ ಮುಂಜಾನೆ 3:49 IST ಕ್ಕೆ ಸೊಲೊಮನ್ ದ್ವೀಪದಲ್ಲಿ ಭೂಮಿಯಿಂದ 95 ಕಿಮೀ ಆಳದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆʼ ಎಂದು NCS ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.

ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.