ಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರು : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಬೆಂಗಳೂರು : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ʻಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರುʼ ಎನ್ನುವ ಮೂಲಕ ರಾಮಸೇನೆ ಮುಖ್ಯಸ್ಥʻ ಪ್ರಮೋದ್ ಮುತಾಲಿಕ್ ʼ ಸಂತಾಪ ಸೂಚಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರು. ರಾಷ್ಟ್ರೀಯ ವಿಚಾರಧಾರೆ ಸಮಾಜಕ್ಕೆ ಕೊಟ್ಟ ಯೋಗಿ ನೂರಾರು ಸ್ವಾಮಿ ವಿವೇಕಾನಂದರನ್ನು ಅವರು ಹುಟ್ಟು ಹಾಕಿದವರು. ಸರರ್ಕಾರ ವಿವಿಗಳಲ್ಲಿ ಸಿದ್ದೇಶ್ವರ ಅಧಯನ ಕೇಂದ್ರ ಆರಂಭಿಸಬೇಕು. ಶ್ರೀಗಳ ಜ್ಞಾನ ವ್ಯರ್ಥ ಮಾಡಬಾರದು, ಗಂಗೆಯಂತೆ ಹರಿಯಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಸದ್ಯ ಸೈನಿಕ ಶಾಲೆಯಲ್ಲಿ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸ್ವಾಮೀಜಿ ದರ್ಶನಕ್ಕಾಗಿ ಇನ್ನೂ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ನಾನಾ ಭಾಗಗಳಿಂದ ಜನರು ಆಗಮಿಸಿದ್ದು ಶ್ರೀಗಳ ದರ್ಶನ ಪಡೆದಿದ್ದಾರೆ.