ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ : ಶಿವಮೊಗ್ಗದ ತ್ಯಾವರೆಚಟ್ನಹಳ್ಳಿ ವಿ ವಿ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಮಾ.28 ರ ಬೆಳಿಗ್ಗೆ 09-30 ರಿಂದ ಸಂಜೆ 05-00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುವೆಂಪುನಗರ, ಎನ್.ಇ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಜೆ.ಎನ್.ಎನ್.ಸಿ.ಕಾಲೇಜು, ಪರ್ಪೇಕ್ಟ್ ಅಲಾಯಿ ಪ್ಯಾಕ್ಟರಿ, ರೆಡ್ಡಿ ಬಡಾವಣೆ, ಶಾಂತಿನಗರ, ಹೊನ್ನಾಳಿರಸ್ತೆ, ತ್ಯಾವರೆಚಟ್ನಹಳ್ಳಿ, ಯು.ಜಿ.ಡಿ., ಶೇಷಾದ್ರಿಪುರಂ, ಲಕ್ಷ್ಮೀ ವೆಂಕಂಟೇಶ್ವರ ಸಾಮಿಲ್, ತ್ರೀಮೂರ್ತಿನಗರ, ನವುಲೆ, ಅಶ್ವಥ್ನಗರ, ಎಲ್.ಬಿ.ಎಸ್.ನಗರ, ಕೀರ್ತಿನಗರ, ಬಸವೇಶ್ವರನಗರ, ಕೃಷಿನಗರ, ದಡ್ಡರಹಳ್ಳಿ, ತರಳಬಾಳು ಬಡಾವಣೆ, ಸೇವಾಲಾಲ್ನಗರ, ಡಾಲರ್ಸ್ ಕಾಲೋನಿ, ಪವನಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಮಾ.29 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಎಂ.ಆರ್.ಎಸ್ 110/11 ಕೆ.ವಿ ವಿದ್ಯುತ್ ಮಾರ್ಗಗಳಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಎಫ್-8 ಜಾವಳ್ಳಿ ಐ.ಪಿ ಫೀಡರ್ನಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಮಾ.29 ರ ಬೆಳಿಗ್ಗೆ 10:00 ರಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಅಬ್ಬರಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.