ವಿಕಲಚೇತನರಿಗೆ ಗುಡ್ ನ್ಯೂಸ್ : 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿಕಲಚೇತನರಿಗೆ ಗುಡ್ ನ್ಯೂಸ್ : 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಡಿಕೇರಿ : ಪ್ರಸಕ್ತ (2022-23) ಸಾಲಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಕೊಡಗು ಜಿಲ್ಲೆಯ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸಲುವಾಗಿ ಆಧಾರ ಯೋಜನೆಯಿದ್ದು ಈ ಯೋಜನೆಯಡಿ ಬ್ಯಾಂಕ್ ಮೂಲಕ ರೂ.50 ಸಾವಿರ ಮತ್ತು ಇಲಾಖೆಯಿಂದ ಶೇ.50 ಸಬ್ಸಿಡಿ (ಸಹಾಯಧನ) ಸೇರಿ ರೂ.1 ಲಕ್ಷ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಈ ಹಿಂದೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು, ಆದರೆ ಆನ್‍ಲೈನ್ ಮೂಲಕ ವಿಲೇ ಮಾಡಲು ತಾಂತ್ರಿಕ ತೊಂದರೆ ಹಾಗೂ ಸಮಯದ ಅಭಾವವಿರುವುದರಿಂದ ಅರ್ಜಿಗಳನ್ನು ಕಚೇರಿಗೆ ಫೆಬ್ರವರಿ, 06 ರೊಳಗೆ ಭೌತಿಕವಾಗಿ (ಆಫ್‍ಲೈನ್‍ನಲ್ಲಿ) ಸಲ್ಲಿಸಲು ತಿಳಿಸಿದೆ. ಜಿಲ್ಲೆಯ 18 ರಿಂದ 55 ವಯೋಮಿತಿಯೊಳಗಿನ ವಿಕಲಚೇತನರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-295829 ನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ