ಪದೇ ಪದೇ ಅತ್ಯಾಚಾರದಿಂದ ಗರ್ಭಿಣಿಯಾದ ಮಗಳು, ತಂದೆಗೆ ಜೀವಾವಧಿ ಶಿಕ್ಷೆ

ಪದೇ ಪದೇ ಅತ್ಯಾಚಾರದಿಂದ ಗರ್ಭಿಣಿಯಾದ ಮಗಳು, ತಂದೆಗೆ ಜೀವಾವಧಿ ಶಿಕ್ಷೆ

ಲಪ್ಪುರಂ(ಕೇರಳ): ತನ್ನ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿದ ತಂದೆಗೆ ಕೇರಳದ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಪೋಕ್ಸೊ ಕಾಯ್ದೆಯಡಿ ಅಪರಾಧಿಗೆ ಮೂರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಮತ್ತು ನ್ಯಾಯಾಲಯವು ಅವನ ಜೀವನದ ಉಳಿದ ಅವಧಿಯಲ್ಲಿ ಜೈಲಿನಲ್ಲಿರಲು ನಿರ್ದೇಶಿಸಿದೆ.

ಅಷ್ಟೇ ಅಲ್ಲದೇ, ನ್ಯಾಯಾಲಯವು ಆರೋಪಿಗೆ 6.6 ಲಕ್ಷ ರೂ. ದಂಡವನ್ನೂ ವಿಧಿಸಿದೆ.

ಪ್ರಕರಣದ ವಿವರಗಳನ್ನು ನೀಡಿದ ಎಸ್‌ಪಿಪಿ, ಮಾರ್ಚ್ 2021 ರಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮೊದಲ ಅತ್ಯಾಚಾರದ ಘಟನೆ ಸಂಭವಿಸಿದೆ. ಆಗ 15 ವರ್ಷದ ಬಾಲಕಿಯಾಗಿದ್ದ ಮಗಳು COVID-19 ಸಾಂಕ್ರಾಮಿಕದ ಕಾರಣ ಮನೆಯಲ್ಲೇ ಆನ್‌ಲೈನ್ ತರಗತಿಗಳನ್ನು ಹೊಂದಿದ್ದಳು. ಈ ವೇಳೆ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅವಳ ತಂದೆ ಬಾಲಕಿಯನ್ನು ತನ್ನ ಮಲಗುವ ಕೋಣೆಗೆ ಎಳೆದೊಯ್ದು ಅತ್ಯಾಚಾರವೆಸಗುತ್ತಿದ್ದ. ಬಾಲಕಿ ಇದಕ್ಕೆ ವಿರೋಧಿಸಿದಾಗ ಆತ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಅಪರಾಧಿ ಹಿಂದೆ ಮದ್ರಸಾದಲ್ಲಿ ಶಿಕ್ಷಕನಾಗಿದ್ದ. ಅಕ್ಟೋಬರ್ 2021 ರವರೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ ಮಗಳ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾನೆ. ನವೆಂಬರ್ 2021 ರಲ್ಲಿ ದೈಹಿಕ ತರಗತಿಗಳು ಪುನರಾರಂಭಗೊಂಡಾಗ, ಬಾಲಕಿ ಶಾಲೆಗೆ ಹೋಗಲು ಪ್ರಾರಂಭಿಸಿದಳು. ಆ ಸಮಯದಲ್ಲಿ ಸ್ವಲ್ಪ ಹೊಟ್ಟೆ ನೋವು ಕಾಣಿಸಿಕೊಂಡಿತು. ಹೀಗಾಗಿ, ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ಏನೂ ಪತ್ತೆಯಾಗಲಿಲ್ಲ.

ಜನವರಿ 2022 ರಲ್ಲಿ ಅವಳು ಮತ್ತೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಗರ್ಭಿಣಿ ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ಹುಡುಗಿ ತನ್ನ ತಂದೆಯೇ ಅಪರಾಧಿ ಎಂದು ಹೇಳಿದ್ದಾಳೆ. ನಂತರ ಈ ಸಂಬಂಧ ಪೊಲೀಸರಿಗೆ ದೂರು ನIಡಲಾಗಿತ್ತು. ಇದರ ಆಧಾರದ ಮೇಲೆ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲಾಯಿತು. ಈ ವೇಳೆ, ಭ್ರೂಣ, ಹುಡುಗಿ ಮತ್ತು ಆಕೆಯ ತಂದೆಯ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಬಾಲಕಿಯ ತಂದೆಯೇ ಅಪರಾಧಿ ಎಂದು ಸಾಬೀತಾಗಿದೆ. ಸಂತ್ರಸ್ತೆ ಮತ್ತು ಆಕೆಯ ತಾಯಿಯ ಹೇಳಿಕೆಗಳ ಜೊತೆಗೆ ಡಿಎನ್‌ಎ ಸಾಕ್ಷ್ಯದಿಂದ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.