ರೈಲು ಪ್ರಯಾಣಿಕರೇ ಗಮನಿಸಿ : ಫೆ.8 ರವರೆಗೆ ಹುಬ್ಬಳ್ಳಿ-ಬೆಂಗಳೂರು ರೈಲು ಸಂಚಾರ ರದ್ದು

ಬೆಂಗಳೂರು : ರೈಲು ಪ್ರಯಾಣಿಕರು ಗಮನಿಸಬೇಕಾದ ಸುದ್ದಿಯಾಗಿದ್ದು,ನೈಋತ್ಯ ರೈಲ್ವೆಯು ಜೋಡಿ ಹಳಿ ಕಾಮಗಾರಿಗಳ ಕಾರಣಗಳಿಂದಾಗಿ ಫೆ.8ರ ತನಕ ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇಷ್ಟೇ ಅಲ್ಲದೇ ಬೆಂಗಳೂರು ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಾಗುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು. ವಿವಿಧ ರೈಲುಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಫೆ.8ರ ತನಕ ಸುಮಾರು 24 ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ರೈಲು ಪ್ರಯಾಣಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಫೆಬ್ರವರಿ 8ರ ಬಳಿಕ ಎಂದಿನಂತೆ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ
ರದ್ದುಗೊಂಡ ರೈಲು ಗಳ ಪಟ್ಟಿ ಇಲ್ಲಿದೆ ಓದಿ
ರೈಲು ನಂಬರ್ 16214 ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್ ಜನವರಿ 31 ರಿಂದ ಫೆಬ್ರವರಿ 9ರ ತನಕ ರದ್ದಾಗಿದೆ. ರೈಲು ನಂಬರ್ 16213 ಅರಸೀಕೆರೆ-ಹುಬ್ಬಳ್ಳಿ ರೈಲು ಫೆಬ್ರವರಿ 8ರ ತನಕ ರದ್ದು.
ರೈಲು ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ಫೆಬ್ರವರಿ 7ರ ತನಕ ರದ್ದಾಗಿದೆ. ರೈಲು ನಂಬರ್ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಫೆಬ್ರವರಿ 7ರ ತನಕ ರದ್ದಾಗಿದೆ.
ರೈಲು ನಂಬರ್ 17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ಮತ್ತು 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7ರಂದು ಮಾತ್ರ ರದ್ದು
ಜೋಧ್‌ಪುರ-ಬೆಂಗಳೂರು ರೈಲು ನಂಬರ್ 16507 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 2 ಮತ್ತು 4ರಂದು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಹರಿಹರ ನಿಲ್ದಾಣ ಇರುವುದಿಲ್ಲ.
ದಾದರ್-ತಿರುನಲ್ವೇಲಿ ರೈಲು ನಂಬರ್ 11021 ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ 31ನೇ ಜನವರಿ 1, 4, 7ನೇ ಫೆಬ್ರವರಿ ತನಕ ಬದಲಾಯಿಸಲಾಗಿದೆ. ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.
ರೈಲು ನಂಬರ್ 12079 ಬೆಂಗಳೂರು-ಹುಬ್ಬಳ್ಳಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಹರಿಹರ-ಹುಬ್ಬಳ್ಳಿ ನಡುವೆ ಫೆಬ್ರವರಿ 7ರ ತನಕ ಭಾಗಶಃ ರದ್ದು. ಹರಿಹರದಲ್ಲಿಯೇ ರೈಲು ನಿಲುಗಡೆಗೊಳ್ಳಲಿದೆ.
ರೈಲು ನಂಬರ್ 12080 ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ -ಹರಿಹರ ನಡುವೆ ಫೆಬ್ರವರಿ 7ರ ತನಕ ಭಾಗಶಃ ರದ್ದು. ಹುಬ್ಬಳ್ಳಿ ಬದಲು ಹರಿಹರದಿಂದ ರೈಲು ಹೊರಡಲಿದೆ.
ರೈಲು ನಂಬರ್ 12778 ಕೊಚುವೇಲಿ-ಹುಬ್ಬಳ್ಳಿ ಹಾವೇರಿ-ಹುಬ್ಬಳ್ಳಿ ನಡುವೆ ಫೆಬ್ರವರಿ 2ರಂದು ಭಾಗಶಃ ರದ್ದು. ಖಾಲಿ ಬೋಗಿಯನ್ನು ಹುಬ್ಬಳ್ಳಿಗೆ ಸಾಗಿಸಲಾಗುತ್ತದೆ.
ರೈಲು ನಂಬರ್ 11035 ದಾದರ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗಕ್ಕೆ ಫೆಬ್ರವರಿ 2ರಂದು ಬದಲಾಯಿಸಲಾಗಿದ್ದು, ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.
ರೈಲು ನಂಬರ್ 16209 ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 3 ಮತ್ತು 5ರಂದು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ, ಹರಿಹರ ನಿಲುಗಡೆ ಇರುವುದಿಲ್ಲ
ವೇಳಾಪಟ್ಟಿಯಲ್ಲಿ ಬದಲಾವಣೆಗಳು
ರೈಲು ನಂಬರ್ 17392 ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 7ರಂದು ಸಂಚಾರ ನಡೆಸಲಿದೆ.
ಪುದುಚೇರಿ-ದಾದರ್ ಎಕ್ಸ್‌ಪ್ರೆಸ್ 11006 ರೈಲು ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮೂಲಕ ಫೆಬ್ರವರಿ 7ರಂದು ಸಂಚಾರ ನಡೆಸಲಿದೆ.
ರೈಲು ನಂಬರ್ 11036 ಮೈಸೂರು-ದಾದರ್ ಎಕ್ಸ್‌ಪ್ರೆಸ್ ಫೆಬ್ರವರಿ 5ರಂದು 70 ನಿಮಿಷ ತಡವಾಗಿ ಸಂಚಾರ. 11006 ಪುರುಚೇರಿ-ದಾದರ್ ಎಕ್ಸ್‌ಪ್ರೆಸ್ ಜನವರಿ 31, ಫೆಬ್ರವರಿ 5ರಂದು 70 ನಿಮಿಷ ತಡ.
ರೈಲು ಸಂಖ್ಯೆ 11022 ತಿರುನಲ್ವೇಲಿ-ದಾದರ್ ಫೆಬ್ರವರಿ 2, 3 ಮತ್ತು 6ರಂದು 70 ನಿಮಿಷ ತಡವಾಗಿ ಸಂಚಾರ
ಮಾರ್ಗ ಬದಲಾವಣೆ
ದಾದರ್ ಪುದುಚೇರಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 11005 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 3, 5 ಮತ್ತು 6ರಂದು ಸಂಚಾರ ನಡೆಸಲಿದೆ. ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.
ರಾಮೇಶ್ವರಂ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07356 ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 5ರಂದು ಸಂಚಾರ ನಡೆಸಲಿದೆ.
ರೈಲು ನಂಬರ್ 14805 ಯಶವಂತಪುರ-ಬರ್ಮಾರ್ ಎಕ್ಸ್‌ಪ್ರೆಸ್ ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮಾರ್ಗವಾಗಿ ಫೆಬ್ರವರಿ 5ರಂದು ಸಂಚಾರ ನಡೆಸಲಿದೆ.
ಯಶವಂತಪುರ-ಬಿಕನೇರ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16587 ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮಾರ್ಗವಾಗಿ ಫೆಬ್ರವರಿ 3 ಮತ್ತು 5ರಂದು ಸಂಚಾರ ನಡೆಸಲಿದೆ.
ರೈಲು ನಂಬರ್ 20656 ಹುಬ್ಬಳ್ಳಿ-ಯಶವಂತಪುರ ರೈಲು ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 4ರಂದು ಸಂಚಾರ ನಡೆಸಲಿದೆ.