ರಾಮನಗರದಲ್ಲಿ 'ರಾಮ ಮಂದಿರ ಕಾಮಗಾರಿ'ಗೆ ಚಾಲನೆ, 40 ಲಕ್ಷ ರೂ.‌ ಬಿಡುಗಡೆ - ಸಚಿವ ಅಶ್ವತ್ಥನಾರಾಯಣ

ರಾಮನಗರದಲ್ಲಿ 'ರಾಮ ಮಂದಿರ ಕಾಮಗಾರಿ'ಗೆ ಚಾಲನೆ, 40 ಲಕ್ಷ ರೂ.‌ ಬಿಡುಗಡೆ - ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಈ ವರ್ಷದ ಬಜೆಟ್ಟಿನಲ್ಲಿ ( Karnataka Budget 2022-23 ) ಘೋಷಿಸಿದ್ದಂತೆ, ರಾಮನಗರದ ರಾಮಗಿರಿಯಲ್ಲಿ ಭವ್ಯ ರಾಮ‌ಮಂದಿರ ( Rama Mandir ) ನಿರ್ಮಾಣಕ್ಕೆ ಸರಕಾರ ಚಾಲನೆ ನೀಡಿದೆ. ಇದಕ್ಕಾಗಿ ಆರಂಭಿಕವಾಗಿ 40 ಲಕ್ಷ ರೂ.ಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಸೋಮವಾರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 'ರಾಮನಗರ ಜಿಲ್ಲೆಯ ಜನತೆಗೆ ಇದು ರಾಮನವಮಿಯ ಉಡುಗೊರೆ ಆಗಿದೆ. ಒಂದೆರೆಡು ವರ್ಷಗಳಲ್ಲಿ ರಾಮದೇವರ ಬೆಟ್ಟದ ಸಮಗ್ರ ಅಭಿವೃದ್ಧಿ ಆಗಲಿದ್ದು, ಇದು ದಕ್ಷಿಣದ ಅಯೋಧ್ಯೆಯಾಗಲಿದೆ' ಎಂದಿದ್ದಾರೆ.

ಇತ್ತೀಚೆಗೆ ಜಿಲ್ಲಾ ಸಚಿವರ ನೇತೃತ್ವದಲ್ಲಿ ರಾಮನಗರದ ಭಕ್ತರ ಗುಂಪು ಅಯೋಧ್ಯೆಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಅಲ್ಲಿನ ರಾಮ ಮಂದಿರಕ್ಕೆ ಬೆಳ್ಳಿಯ ಇಟ್ಟಿಗೆ, ರೇಷ್ಮೆ ಸೀರೆ ಮತ್ತು ವಸ್ತ್ರವನ್ನು ಕಾಣಿಕೆಯಾಗಿ ಅರ್ಪಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಂದೆರೆಡು ದಿನಗಳಲ್ಲೇ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಪ್ಲಾನ್ ಅಂತಿಮವಾಗಲಿದೆ ಎಂದು ಗೊತ್ತಾಗಿದೆ.