ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ ತಿಂಗಳ ಗೌರವಧನ ಬಿಡುಗಡೆ

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಲಾಗಿರುವ ಅತಿಥಿ ಶಿಕ್ಷಕರುಗಳಿಗೆ ಅಕ್ಟೋಬರ್ ತಿಂಗಳ ಗೌರವ ಸಂಭಾವನೆಯನ್ನು ಬಿಡುಗಡೆ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2022-2023 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಬಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ನೇಮಕ ಮಾಡಿಕೊಳ್ಳಲಾದ ಅತಿಥಿ ಶಿಕ್ಷಕರುಗಳಿಗೆ ಅಕ್ಟೋಬರ್ ತಿಂಗಳ ಪೂರ್ಣ ಗೌರವ ಸಂಭಾವನ ಪಾವತಿಸಲು ಕ್ರಮವಹಿಸುವಂತೆ ತಿಳಿಸಿದೆ.