ಮಾರಮ್ಮನ ಡಿಸ್ಕೋ' ಹಾಡುವಾಗ 'ALL OK' ಸಿಂಗರ್ ನನ್ನು ತಳ್ಳಿ ಬೀಳಿಸಿದ ಫ್ಯಾನ್

ಕಾರವಾರ : ಕನ್ನಡ ರ್ಯಾಪರ್ ಸಿಂಗ್ ಆಲ್ ಓಕೆ ಖ್ಯಾತಿಯ ಅಲೋಕ್ ಬಾಬು ವೇದಿಕೆಯಲ್ಲೇ ಬಿದ್ದು ಪಲ್ಟಿಯಾದ ಘಟನೆ ಕಾರವಾರ ನಗರದ ಮಯೂರವರ್ಮ ವೇದಿಕೆಯಲ್ಲಿ ನಡೆದಿದೆ.
ಪೊಲೀಸರ ಲಾಠಿ ಏಟಿಗೆ ಹೆದರಿದ ಅಭಿಮಾನಿಯೋರ್ವ ಆಲ್ ಓಕೆ ಗಾಯಕ ಅಲೋಕ್ ಬಾಬುರನ್ನು ವೇದಿಕೆಯಲ್ಲೇ ತಳ್ಳಿ ಓಡಿದ್ದು, ಇದರಿಂದಾಗಿ ವೇದಿಕೆಯಲ್ಲಿ ಹಾಡು ಹೇಳುತ್ತಿದ್ದ ಕನ್ನಡ ರ್ಯಾಪರ್ ಸಿಂಗ್ ಆಲ್ ಓಕೆ ಖ್ಯಾತಿಯ ಅಲೋಕ್ ಬಾಬು ವೇದಿಕೆಯಲ್ಲೇ ಬಿದ್ದು ಪಲ್ಟಿಯಾಗಿದ್ದಾರೆ.
ಆಲ್ ಓಕೆ ರ್ಯಾಪರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ವೇದಿಕೆ ಬಳಿಯೇ ಅಭಿಮಾನಿಗಳು ಗುಂಪುಗೂಡಿ ಅಲೋಕ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು.ಅಭಿಮಾನಿಗಳನ್ನು ಕೆಳಗಿಳಿಸಲು ಪೊಲೀಸರೊಬ್ಬರು ಸಡನ್ ಆಗಿ ವೇದಿಕೆಗೆ ಆಗಮಿಸಿದ್ದು, ಇದರಿಂದ ಭಯಗೊಂಡ ಅಭಿಮಾನಿಯೊಬ್ಬ ಅಲೋಕ್ ಅವರನ್ನು ತಳ್ಳಿ ಬೀಳಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.