ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ | ಹರ್ಮನ್‌ ನೇತೃತ್ವ; ಶಿಖಾ ಪಾಂಡೆಗೆ ಅವಕಾಶ

ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ | ಹರ್ಮನ್‌ ನೇತೃತ್ವ; ಶಿಖಾ ಪಾಂಡೆಗೆ ಅವಕಾಶ

ವದೆಹಲಿ: ವೇಗದ ಬೌಲರ್‌ ಶಿಖಾ ಪಾಂಡೆ ಅವರು ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಫೆ.10 ರಿಂದ 26ರ ವರೆಗೆ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಲಾಯಿತು.

ಶಿಖಾ ಅವರು 2021ರ ಅಕ್ಟೋಬರ್‌ನಲ್ಲಿ ಕೊನೆಯದಾಗಿ ರಾಷ್ಟ್ರೀಯ ತಂಡಕ್ಕೆ ಆಡಿದ್ದರು. ಇದೀಗ ಅವರು ಅಚ್ಚರಿಯ ರೀತಿಯಲ್ಲಿ ಸ್ಥಾನ ಪಡೆದಿದ್ದಾರೆ. 33 ವರ್ಷದ ಶಿಖಾ 55 ಏಕದಿನ ಮತ್ತು 56 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಜೆಮಿಮಾ ರಾಡ್ರಿಗಸ್‌ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಈಚೆಗೆ ನಡೆದ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ವಿಶ್ವಕಪ್‌ಗೆ ಮುನ್ನ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್‌ ತಂಡಗಳು ಒಳಗೊಂಡಂತೆ ನಡೆಯಲಿರುವ ತ್ರಿಕೋನ ಸರಣಿಗೂ ಭಾರತ ತಂಡವನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.

ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಜ.19 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಜ.23 ರಂದು ವೆಸ್ಟ್‌ ಇಂಡೀಸ್‌ ವಿರುದ್ದ ಆಡಲಿದೆ.

ವಿಶ್ವಕಪ್‌ ಟೂರ್ನಿಗೆ ಭಾರತ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್‌), ರಿಚಾ ಘೋಷ್‌ (ವಿಕೆಟ್‌ ಕೀಪರ್‌), ಜೆಮಿಮಾ ರಾಡ್ರಿಗಸ್‌, ಹರ್ಲೀನ್‌ ಡಿಯೊಲ್, ದೀಪ್ತಿ ಶರ್ಮ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್‌, ಅಂಜಲಿ ಸರ್ವಾನಿ, ಪೂಜಾ ವಸ್ತ್ರಕರ್‌, ರಾಜೇಶ್ವರಿ ಗಾಯಕವಾಡ್, ಶಿಖಾ ಪಾಂಡೆ

ಹೆಚ್ಚುವರಿ ಆಟಗಾರ್ತಿಯರು: ಸ್ನೇಹಾ ರಾಣಾ, ಎಸ್.ಮೇಘನಾ, ಮೇಘನಾ ಸಿಂಗ್

ತ್ರಿಕೋನ ಸರಣಿಗೆ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ (ಉಪನಾಯಕಿ), ಯಸ್ತಿಕಾ (ವಿಕೆಟ್‌ ಕೀಪರ್‌), ಜೆಮಿಮಾ, ಹರ್ಲೀನ್‌ , ದೀಪ್ತಿ , ದೇವಿಕಾ, ರಾಜೇಶ್ವರಿ, ರಾಧಾ, ರೇಣುಕಾ, ಮೇಘನಾ ಸಿಂಗ್‌, ಅಂಜಲಿ, ಸುಷ್ಮಾ ವರ್ಮಾ, ಅಮನ್‌ಜೋತ್‌ ಕೌರ್‌, ಪೂಜಾ, ಎಸ್‌.ಮೇಘನಾ, ಸ್ನೇಹಾ ರಾಣಾ, ಶಿಖಾ ಪಾಂಡೆ