ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ : ಬಿಸಿ ಕಬ್ಬಿಣದಿಂದ 20 ಬರೆಎಳೆದು ಹಸುಗೂಸು ಸಾವು

ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ : ಬಿಸಿ ಕಬ್ಬಿಣದಿಂದ 20 ಬರೆಎಳೆದು ಹಸುಗೂಸು ಸಾವು

ಧ್ಯಪ್ರದೇಶ : ಶಾದೋಲ್‌ ಜಿಲ್ಲೆಯಲ್ಲಿ ರೋಗ ಗುಣಮುಖವಾಗಲೆಂದು ಕಾದ ಕಬ್ಬಿಣದ ರಾಡ್‌ನಿಂದ 20 ಬರೆಎಳೆದ ಅಮಾನವೀಯವಾಗಿ ಹಸುಗೂಸು ಸಾವನ್ನಪ್ಪಿದ ಎರಡನೇ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆಯ ಹೆಸರಲ್ಲಿ ಬಿಸಿಬಿಸಿಯಾದ ಕಬ್ಬಿಣದ ರಾಡ್​​ನಿಂದ ಮಗುವಿನ ಮೇಲಿಗೆ 20 ಬಾರಿ ಬರೆಎಳೆಯುವ ಮೂಲಕ ಮೂಡನಂಬಿಕೆಯನ್ನು ಹೊಂದಿದ್ದರು. ಗಂಭೀರ ಗಾಯಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು. ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿತ್ತು. ಈ ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ವೇಳೆ ಮೂಡನಂಬಿಕೆ ಸಂಗತಿ ಬಹಿರಂಗವಾಗಿದೆ. ಈ ಹಿಂದೇಯೂ ಇಂತಹದ್ದೇ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.