ಬೇಲೂರು: ಸೊಸೈಟಿಗೆ ನುಗ್ಗಿ ಅಕ್ಕಿ ತಿಂದ ಕಾಡಾನೆ

ಬೇಲೂರು: ಸೊಸೈಟಿಗೆ ನುಗ್ಗಿ ಅಕ್ಕಿ ತಿಂದ ಕಾಡಾನೆ

ಬೇಲೂರು: ಅನ್ನಭಾಗ್ಯ ಅಕ್ಕಿಯ ಸೊಸೈಟಿ ಗೋದಾಮಿನ ಮೇಲೆ ಕಾಡಾನೆ ಸತತ ೨ ನೇ ಬಾರಿ ದಾಳಿ ನಡೆಸಿರುವ ಘಟನೆ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ಕಾಡಾನೆಯೊಂದು ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮೇಲೆ ಬೆಳಗಿನ ಜಾವ ತನ್ನ ಹಸಿವನ್ನು ಹಿಂಗಿಸಲು ದಾಳಿ ನಡೆಸಿದೆ.

ದಾಳಿ ನಡೆಸಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಗಂಟೆಗೂ ಹೆಚ್ಚು ಕಾಲ ರೋಲಿಂಗ್ ಶಟರ್ ಮುರಿಯಲು ಯತ್ನಿಸಿದ ಆನೆ ಕೊನೆಗೆ ಕೇವಲ ಒಂದು ಮೂಟೆ ಅಕ್ಕಿಯನ್ನು ಮಾತ್ರ ಹೊರಗೆ ಎಳೆದು ಅದರಲ್ಲಿ ಅರ್ಧ ತಿಂದು ನಂತರ ಪಯಣ ಮುಂದುವರಿಸಿದೆ.

ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಆನೆ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಇದೇ ಸೊಸೈಟಿಗೆ ದಾಳಿ ಮಾಡಿ ಕೇವಲ ಒಂದು ಮೊಟ್ಟೆ ಅಕ್ಕಿಯನ್ನು ಮಾತ್ರ ತಿಂದು ಹಾಕಿದ್ದ ಘಟನೆ ಮಾಸುವ ಮೊದಲೇ ಮತ್ತೊಮ್ಮೆ ಇದೇ ಆನೆದಾಳಿ ಮಾಡಿರುವುದು ವಿಶೇಷವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬೇಲೂರು ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಆಹಾರ ಇಲಾಖೆ ಶಿರಸ್ತೆದಾರ್ ಟಿ ಮಂಜು ನಾಥ್ ಮಾತನಾಡಿ, ಅನ್ನಭಾಗ್ಯದ ಯೋಜನೆ ಅಡಿಯಲ್ಲಿ ಗೋದಾಮಿನಲ್ಲಿ ೫೦ ಕ್ವಿಂಟಾಲ್ ಅಕ್ಕಿ ಹಾಗೂ ಗೋದಿಯನ್ನು ಸಂಗ್ರಹಿಸಿಡಲಾಗಿದೆ. ಕಳೆದ ವರ್ಷ ಇದೆ ಆನೆ ಗೋದಾಮಿಗೆ ದಾಳಿ ಮಾಡಿ ಅಕ್ಕಿಯನ್ನು ತಿಂದು ಹಾಕಿತ್ತು ತದನಂತರದಲ್ಲಿ ಆನೆಯನ್ನು ಸೆರೆಹಿಡಿದು ಚಾಮ ರಾಜನಗರದ ಅರಣ್ಯಕ್ಕೆ ಬಿಡಲಾ ಗಿತ್ತು. ಆದರೆ ಮತ್ತೆ ರೇಡಿಯೋ ಕಾಲರ್ ಅಳವಡಿಸಿರುವ ಇದೇ ಆನೆ ದಾಳಿ ವೇಳೆ ಗೋದಾಮಿನೊಳಗೆ ಇಡಲಾಗಿದ್ದ ಪೀಠೋಪಕರಣ ಹಾಗೂ ರೋಲಿಂಗ್ ಶಟರ್ ಅನ್ನು ನಾಶಪಡಿಸಿದೆ ಎಂದು ತಿಳಿಸಿದರು.

ಸೊಸೈಟಿ ಕಾರ್ಯದರ್ಶಿ ಸತೀಶ್ ಕುಮಾರ್ ಮಾತನಾಡಿ, ಆನೆಯು ೧ ಚೀಲ ಅಕ್ಕಿಯನ್ನು ತಿಂದಿದ್ದು, ೨ ಚೀಲಗಳನ್ನು ಗೋದಾಮಿನ ಹೊರಗೆ ಎಳೆದಾಡಿ ನಾಶಪಡಿಸಿದೆ. ಕಾಡಾನೆಯ ಅಟ್ಟ ಹಾಸಕ್ಕೆ ಸೊಸೈಟಿ ಬಾಗಿಲ ರೋ ಲಿಂಗ್ ಶೆಟರ್ ಸೇರಿದಂತೆ ಸುಮಾರು ೪೦ ಸಾವಿರ ರೂ. ಮೌಲ್ಯದ ಸಾಮಗ್ರಿ ಹಾನಿಯಾಗಿದೆ ಎಂದರು.

ಕಾಫಿ ಬೆಳಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಮುಂದುವರೆದ ಕಾಡಾನೆ ದಾಳಿಯಲ್ಲಿ ಅರೆಹಳ್ಳಿ ಹೋಬಳಿಯ ಅನುಘಟ್ಟ ಸೊಸೈಟಿಯ ಗೋಡನ್ ಶೆಲ್ಟರ್ ಮುರಿದು ಒಂಟಿ ಆನೆ ಬಡವರ ಅಕ್ಕಿಗೆ ಬಾಯಿ ಹಾಕಿದೆ. ಐದು ತಿಂಗಳ ಹಿಂದೆ ಇದೆ ಆನೆ ದಾಳಿ ಮಾಡಿತ್ತು ನಿರಂತರ ದಾಳಿಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ ಬೆಳಗಾರರ ಸಂಘಟನೆಯ ಹೋರಾಟದ ಫಲವಾಗಿ ಸರ್ಕಾರ ಟಾಸ್ ಫೋ ರ್ಸ್ ರಚನೆ ಮಾಡಿ ಕೈ ತೊಳೆದು ಕೊಂಡಿದೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆನೆ ಹಾವಳಿಯಿಂದ ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.