ಬೆಂಗಳೂರಿನಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು: ಅರಳಿಕಟ್ಟೆಯಲ್ಲಿರುವ ನಾಗರದೇವರ ಮೂರ್ತಿ ವಿರೂಪ

ಬೆಂಗಳೂರಿನಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು: ಅರಳಿಕಟ್ಟೆಯಲ್ಲಿರುವ ನಾಗರದೇವರ ಮೂರ್ತಿ ವಿರೂಪ

ಬೆಂಗಳೂರು: ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಚಿಕ್ಕತೋಗೂರಿನಲ್ಲಿ ಕಿಡಿಗೇಡಿಗಳು ನಾಗದೇವರ ಕಲ್ಲುಗಳನ್ನು ಧ್ವಂಸಗೊಳಿಸಿದ್ದಾರೆ.

ಹೆದ್ದಾರಿಯ ಪಕ್ಕದಲ್ಲಿಯೇ ಇರುವ ನಾಗದೇವರ ಅರಳಿಕಟ್ಟೆಯಲ್ಲಿರುವ ನಾಗದೇವರ ಮೂರ್ತಿಯನ್ನು ಕಲ್ಲಿನಿಂದ ಹೊಡೆದು ವಿರೂಪಗೊಳಿಸಲಾಗಿದೆ.ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಯಾರೋ ಕಿಡಿಗೇಡಿಗಳಿಂದ ಕೃತ್ಯ ನಡೆದಿದೆ. ಈ ಭಾಗದಲ್ಲಿ ಸಾಕಷ್ಟು ಸಿಸಿಟಿವಿ ದೃಶ್ಯಗಳು ಸೆರೆಯಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿಗೆ ಒಳಪಡುವ ಚಿಕ್ಕತೋಗರಿನ ಅರಳಿಕಟ್ಟೆ ಬಳಿ ಈ ನಾಗರದೇವರ ಕಟ್ಟೆ ಇದ್ದು, ಸುಮಾರು ೩೦ ವರ್ಷಗಳಿಂದ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಮಂಗಳವಾರ ರಾತ್ರಿ ಯಾರೋ ದುಷ್ಕರ್ಮಿಗಳು ಬಂದು ಈ ವಿಕೃತಿ ಮೆರೆದಿದ್ದಾರೆ.