ಬೆಂಗಳೂರಿನಲ್ಲಿ 'ಬೆಸ್ಕಾಂ' ಸಿಬ್ಬಂದಿ ಅನುಮಾನಾಸ್ಪದ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ಬೆಸ್ಕಾಂ ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪಣತ್ತೂರು ದಿಣ್ಣೆ ಬಳಿ ವಿವೇಕ್ (26) ಎಂಬುವವರ ಶವ ಪತ್ತೆಯಾಗಿದೆ. ಘಟನೆ ನಡೆದು 1 ಗಂಟೆ ಆದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ, ತಡವಾಗಿ ಆಗಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಸ್ಕಾಂ ಸಿಬ್ಬಂದಿ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದ್ದು, ಹೆಚ್ಚಿನ ಮಾಹಿತಿ ಅಪ್ ಡೇಟ್ ಆಗಲಿದೆ.
ಲೋಕಾಯುಕ್ತ ದಾಳಿ ಪ್ರಕರಣ : ಬಿಜೆಪಿ ಶಾಸಕನ ಪುತ್ರ ಪ್ರಶಾಂತ್ ಮನೆಯಲ್ಲಿ ಮಹತ್ವದ 'ಡೈರಿ' ಪತ್ತೆ
ಬೆಂಗಳೂರು : ಲಂಚದ ಹಣದ ಕೇಸಿಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಪುತ್ರ ಪ್ರಶಾಂತ್ಗೆ ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇಂದು ಬೆಳಗ್ಗೆ ಆರೋಪಿ ಪ್ರಶಾಂತ್ ನನ್ನು ಲೋಕಾಯುಕ್ತ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ವೇಳೆಯಲ್ಲಿ ನ್ಯಾಯಾಧೀಶರು, 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸುವುದರ ಬಗ್ಗೆ ಆದೇಶ ಹೊರಡಿಸಿದೆ. ಇದೇ ವೇಳೆ ಪ್ರಶಾಂತ್ ಸೇರಿ ಒಟ್ಟು ಐವರಿಗೆ 14 ದಿನ ನ್ಯಾಯಾಂಗ ಬಂಧನದಲ್ಲಿ ಇಡುವ ಬಗ್ಗೆ ಆದೇಶ ನೀಡಲಾಗಿದೆ.
ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಂಜಯನಗರದ ಪ್ರಶಾಂತ್ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದೆ. ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮನೆ ಪರಿಶೀಲನೆ ನಡೆಸಿದಾಗ ಡೈರಿಯೊಂದು ಪತ್ತೆಯಾಗಿದ್ದು, ಡೈರಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಡೈರಿಯಲ್ಲಿ ಮಹತ್ವದ ಮಾಹಿತಿ ಉಲ್ಲೇಖಿಸಲಾಗಿದ್ದು, ಈ ಹಿಂದೆ ಪ್ರಶಾಂತ್ ಕರ್ತವ್ಯ ನಿರ್ವಹಿಸಿದ ಹುದ್ದೆಗಳ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.