ಬೆಂಗಳೂರಿಗರೇ ಎಚ್ಚರ..! ಕೊಳಗೇರಿ ನಿವಾಸಿಗಳಲ್ಲಿ ʼಸಾಂಕ್ರಾಮಿಕವಲ್ಲದ ಕಾಯಿಲೆ ʼಹೆಚ್ಚಳ : ಆಘಾತಕಾರಿ ಸಂಗತಿ ಸಮೀಕ್ಷೆ

ಬೆಂಗಳೂರಿಗರೇ ಎಚ್ಚರ..! ಕೊಳಗೇರಿ ನಿವಾಸಿಗಳಲ್ಲಿ ʼಸಾಂಕ್ರಾಮಿಕವಲ್ಲದ ಕಾಯಿಲೆ ʼಹೆಚ್ಚಳ : ಆಘಾತಕಾರಿ ಸಂಗತಿ ಸಮೀಕ್ಷೆ

ಬೆಂಗಳೂರು : ದೇಶದಲ್ಲಿ ಡೆಡ್ಲಿ ಕೊರೊನಾ ಬೆನ್ನಲ್ಲೆ ಹಲವು ರೀತಿ ರೋಗಗಳು ಸದ್ದಿಲ್ಲದೇ ಎಂಟ್ರಿಯಾಗಿದೆ. ಅದರಲ್ಲೂ ಇತ್ತೀಚಿಗೆ ಎನ್‌ಜಿಒ ಲೇಬರ್ನೆಟ್ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು' ಬೆಂಗಳೂರಿನ ಕೊಳಗೇರಿ ನಿವಾಸಿಗಳಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆ ಹೆಚ್ಚಳವಾಗಿದೆ ' ಬಹಿರಂಗವಾಗಿದೆ

2020ರ ಆಗಸ್ಟ್ & ಅಕ್ಟೋಬರ್ ತಿಂಗಳ ನಡುವೆ ಎನ್‌ಜಿಒ ಲೇಬರ್ನೆಟ್ ಸಮೀಕ್ಷೆ ನಡೆದಿದ್ದು, ಬೆಂಗಳೂರಿನ ಒಟ್ಟು 36,034 ಕೊಳಗೇರಿ ನಿವಾಸಿಗಳನ್ನು ಸಮೀಕ್ಷೆಗೆ ಭಾಗಿಯಾಗಿದ್ದರು

ಈ ಪೈಕಿ ಶೇ 6.25 ರಷ್ಟು ಮಂದಿ ಅಧಿಕ ಬಿಪಿ ಮತ್ತು ಶೇಕಡಾ 4.7 ರಷ್ಟು ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗಿದ್ದಾರೆ ಮಾದರಿಯ 6,748 ಜನರಲ್ಲಿ ಮಧುಮೇಹ ತಪಾಸಣೆ ಮಾಡಲಾಗಿದ್ದು, ಹೆಚ್ಚು ಅಪಾಯಕಾರಿ ಅಂಶಗಳನ್ನು ಹೊಂದಿದ್ದಾರೆ.

ಶೇ 7.88 ರಷ್ಟು ಜನರು ಟೈಪ್ -2 ಮಧುಮೇಹವನ್ನು ಹೊಂದಿದ್ದಾರೆ ಮತ್ತು ಶೇ 22.2 ಪ್ರತಿಶತದಷ್ಟು ಜನರು ಪೂರ್ವ ಮಧುಮೇಹವನ್ನು ಹೊಂದಿದ್ದಾರೆಂದು ಸಮೀಕ್ಷೆ ಮಾಹಿತಿ ತಿಳಿದಿದೆ. ಎರಡೂ ಮಾದರಿಗಳಲ್ಲಿ ಪ್ರತಿ ಶೇ.ಒಂದಕ್ಕಿಂತ ಹೆಚ್ಚು ಕಡಿಮೆ ಬಿಪಿ ಮತ್ತು ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿದೆ.

'ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಾಂಪ್ರದಾಯಿಕವಾಗಿ ಮೇಲ್ಮಧ್ಯಮ ವರ್ಗದವರಲ್ಲಿ ಹೆಚ್ಚು ಸಾಮಾನ್ಯವಾಗಿರುವ ಜೀವನಶೈಲಿ ರೋಗಗಳಾಗಿವೆ' ಎಂದು ಲೇಬರ್ನೆಟ್‌ನ ಹಿರಿಯ ಉಪಾಧ್ಯಕ್ಷ ಡಾ.ಬಟೂಲ್ ಫಾತಿಮಾ ಹೇಳಿದರು. ಸಾರ್ವಜನಿಕ ಆರೋಗ್ಯ ಸಂಶೋಧಕ ಪ್ರಸನ್ನ ಸಾಲಿಗ್ರಾಮ ಮಾತನಾಡಿ, ಕಳೆದ ದಶಕದಲ್ಲಿ ವಲಸೆ ಕಾರ್ಮಿಕರಲ್ಲಿ ಎನ್‌ಸಿಡಿಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರು.

ಹೆಚ್ಚಿನ ಸ್ಲಂ ನಿವಾಸಿಗಳು ಪ್ರಾಥಮಿ ಆರೋಗ್ಯ ಕೇಂದ್ರದಲ್ಲಿನ ವ್ಯವಸ್ಥೆಯನ್ನು ಬಳಸುತ್ತಿಲ್ಲ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಡಾ. ಫಾತಿಮಾ ಅಂದಾಜಿಸಿರುವ ಪ್ರಕಾರ, ರೋಗನಿರ್ಣಯ ಮಾಡಿದವರಲ್ಲಿ ಶೇ 60 ರಿಂದ 70 ರಷ್ಟು ಜನರು ತಮ್ಮ ಸ್ಥಿತಿಯ ಬಗ್ಗೆ ತಿಳಿದಿರಲಿಲ್ಲ ಮತ್ತು ಸಕಾಲಿಕ ಚಿಕಿತ್ಸೆ ಕೂಡ ಪಡೆಯುತ್ತಿಲ್ಲ.

ಸಮೀಕ್ಷೆಗೊಳಪಟ್ಟ 36,034 ಜನರಲ್ಲಿ ಕ್ರಮವಾಗಿ ಶೇ 15.9, ಶೇ 5.9 ಮತ್ತು ಶೇ 22.9 ಜನರು ಮಾತ್ರ ಆಯುಷ್ಮಾನ್ ಭಾರತ್, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಅಥವಾ ಬಿಪಿಎಲ್ ಕಾರ್ಡ್ ಹೊಂದಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕ ಆರೋಗ್ಯ ವಿಮೆಗೆ ಅರ್ಹರಾಗಿರುತ್ತಾರೆ. ಕೇವಲ 384 ಮಹಿಳೆಯರು ಗರ್ಭಾವಸ್ಥೆಯಲ್ಲಿ ಉಚಿತ ಪಡಿತರ ಮತ್ತು ಸ್ಕ್ಯಾನ್‌ಗೆ ಅಗತ್ಯವಿರುವ ತಾಯಿ ಕಾರ್ಡ್ ಹೊಂದಿದ್ದರು ಎಂದು ತಿಳಿದುಬಂದಿದೆ

ಈ ಎನ್‌ಜಿಒ ಲೇಬರ್ನೆಟ್ ನಡೆಸಿದ ಸಮೀಕ್ಷೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಗಮನಾರ್ಹ ಸಂಖ್ಯೆಯ ಕೊಳಗೇರಿ ನಿವಾಸಿಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದಂತೂ ನಿಜ