ನನಗೊಂದು ಮಂತ್ರಿ ಸ್ಥಾನ ಕೊಡ್ತೀರಾ ಅಂತ ಯಡಿಯೂರಪ್ಪ ನನ್ನ ಬಳಿ ಬಂದಿದ್ರು: ಕುಮಾರಸ್ವಾಮಿ ಹೇಳಿದ್ದೇನು.?

ಶಿವಮೊಗ್ಗ,ಫೆಬ್ರವರಿ4: ನನಗೆ ಬಿಜೆಪಿ ಪಕ್ಷದಲ್ಲಿ ಹಲವು ಸಮಸ್ಯೆಗಳನ್ನ ಮಾಡಿದ್ದಾರೆ. ನಾನು ಬಿಜೆಪಿ ಬಿಡಬೇಕು ಎಂದುಕೊಂಡಿದ್ದೇನೆ, ನಿಮ್ಮ ಪಕ್ಷಕ್ಕೆ ಬಂದರೆ ನನಗೊಂದು ಮಂತ್ರಿ ಸ್ಥಾನ ಕೊಡ್ತೀರಾ ಅಂತ ಬಿ ಎಸ್ ಯಡಿಯೂರಪ್ಪ ನನ್ನ ಬಳಿ ಬಂದಿದ್ರು, ನಾನೇ ವರಿಗೆ ಬುದ್ಧಿವಾದ ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಉಳಿಸಲು ನಡೆಯುತ್ತಿರುವ ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪನವರಿಗಿಂದ ನಾನು ವಯಸ್ಸಿನಲ್ಲಿ ಚಿಕ್ಕವನಾದರೂ,ರಾಜಕೀಯದಲ್ಲಿ ಅನುಭವ ಇಲ್ಲದೇ ಇದ್ದರೂ, ಅವರ ಪಕ್ಷಗ ಬಿಡುವ ವಿಚಾರದಲ್ಲಿ ನಾನೇ ತಿಳಿ ಹೇಳಿದ್ದೇ ಎಂದು ಹೇಳಿದರು.
2005-06 ನೇ ಇಸವಿಯ ನೆನಪು, ಅವರು ಮರೆತಿದ್ದಾರೆ. ನಾನೇ ಬುದ್ಧಿವಾದ ಹೇಳಿ, ಬಿಜೆಪಿ ಶಾಸಕರು ಅಸಮಾಧಾನದಿಂದಿದ್ದಾರೆ ಅವರೆಲ್ಲರೂ ಪಕ್ಷ ಬಿಡಬೇಕು ಎಂದು ಕೊಂಡಿದ್ದಾರೆ. ಅವರನ್ನೆಲ್ಲಾ ಒಂದು ಗುಂಪು ಮಾಡಿ, ನಿಮ್ಮ ಶಕ್ತಿ ಬೆಳೆಸಿಕೊಂಡರೆ ನಿಮ್ಮ ನಾಯಕತ್ವ ಉಳಿಯುತ್ತೆ ಎಂದು ಸಲಹೆ ನೀಡಿದ್ದೆ. ನಾನು ಕಥೆ ಕಟ್ಟಿ ಹೇಳುತ್ತಿಲ್ಲ. ನಾನು ಅಂದು ಬಿಜೆಪಿ ಜೊತೆ ಸರ್ಕಾರ ಮಾಡದೇ ಹೋಗಿದ್ದರೆ, ಯಡಿಯೂರಪ್ಪನವರು ಅವರ ಮಕ್ಕಳು ಇಷ್ಟು ಆನಂದದಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ನಾಲ್ಕು ಸಲ ಸಿಎಂ ಆದ್ರಿ ಯಾವ ಪುರುಷಾರ್ಥಕ್ಕೆ..? ಮಂಡ್ಯದಲ್ಲಿ ಹುಟ್ಟಿ, ಶಿವಮೊಗ್ಗ ಬಂದ್ರಿ. ನಿಮಗೆ ಆತ್ಮಸಾಕ್ಷಿಯಿದ್ದರೆ ಪ್ರಧಾನಿ ಮೋದಿ ಬಳಿ ಹೋಗಿ ವಿಐಎಸ್ ಎಲ್ ಕಾರ್ಖಾನೆ ಉಳಿಸಿ ಎಂದು ಸವಾಲೆಸೆದರು.
ಜೆಡಿಎಸ್ ಪಂಚ ರತ್ನ ಹೆಸರು ಏಕೆ ಇಟ್ಟಿದ್ದಾರೆ? ಅದು ನವಗ್ರಹ ಯಾತ್ರೆ ಎಂದ ಪ್ರಹ್ಲಾದ್ ಜೋಶಿ
ಜೆಡಿಎಸ್ ನಡೆಸುತ್ತಿರುವ ಯಾತ್ರೆಗೆ ಪಂಚರತ್ನ ಬದಲಾಗಿ ನವಗ್ರಹ ಯಾತ್ರೆ ಎಂದು ಹೆಸರಿಡಬೇಕಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಪಂಚ ರತ್ನ ಹೆಸರು ಏಕೆ ಇಟ್ಟಿದ್ದಾರೆ? ಎಂಬ ಬಗ್ಗೆ ಗೊಂದಲ ಆಗಿದೆ.ಜೆಡಿಎಸ್ ನಲ್ಲಿ ದೇವೇಗೌಡರು ಹಾಗೂ ಅವರ ಇಬ್ಬರು ಮಕ್ಕಳು. ಇಬ್ಬರು ಮಕ್ಕಳ ಹೆಂಡತಿಯರು. ಹಾಗೂ ಅವರ ಇಬ್ಬರು ಮಕ್ಕಳು, ಒಬ್ಬರು ಎಂಎಲ್ ಸಿ, ಮತ್ತೊಬ್ಬರು ಎಂಪಿ. ಲೆಕ್ಕ ಮಾಡಿದರೆ ಒಟ್ಟು ಒಂಬತ್ತು ಜನ ಇದ್ದಾರೆ. ಈ ನಿಟ್ಟಿನಲ್ಲಿ ಪಂಚ ರತ್ನ ಯಾತ್ರೆ ಬದಲಾಗಿ ನವ ಗೃಹ ಯಾತ್ರೆ ಎಂದು ಹೆಸರು ಇಡಬೇಕಿತ್ತು ಎಂದು ಲೇವಡಿ ಮಾಡಿದರು.
ದೇವೇಗೌಡರ ಮನೆಯಲ್ಲಿ ಬಡೆದಾಟ ನಡೆದಿತ್ತು. ಈ ಬಗ್ಗೆ ಹೈಕಮಾಂಡ್ ಬಗೆಹರಿಸುತ್ತೆ ಎನ್ನುತ್ತಾರೆ. ಆವರ ಹೈಕಮಾಂಡ್ ಎಲ್ಲಿ ಇರುವುದು? ಅವರ ಅಡಿಗೆ ಮನೆಯಲ್ಲೇ, ಕುಟುಂಬದಲ್ಲಿ ಒಟ್ಟಿಗೆ ಇರಲು ಯೋಗ್ಯತೆ ಇಲ್ಲ ಅಂದರೆ, ರಾಜ್ಯ ಉದ್ಧಾರ ಮಾಡ್ತಾರಾ? ಎಂದು ಪ್ರಶ್ನಿಸಿದರು.