ನಟ 'ಅಂಬರೀಶ್ ಸ್ಮಾರಕ' ಲೋಕಾರ್ಪಣೆ : 'ಅಂಬಿ' ನೆನೆದು ಕಣ್ಣೀರಿಟ್ಟ ಸುಮಲತಾ

ನಟ 'ಅಂಬರೀಶ್ ಸ್ಮಾರಕ' ಲೋಕಾರ್ಪಣೆ : 'ಅಂಬಿ' ನೆನೆದು ಕಣ್ಣೀರಿಟ್ಟ ಸುಮಲತಾ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಇಂದು ನಟ, ಮಾಜಿ ಸಚಿವ ಅಂಬರೀಶ್ ಅವರ ಸ್ಮಾರಕವನ್ನು ( Actor Ambareesh ) ಲೋಕಾರ್ಪಣೆಗೊಳಿಸಿದ್ದಾರೆ.

ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಅಂಬರೀಷ್ ಪತ್ನಿ , ಸಂಸದೆ ಸುಮಲತಾ ಕಣ್ಣೀರಿಟ್ಟಿದ್ದಾರೆ.

ಜೀವನದಲ್ಲಿ ಅಂಬರೀಷ್ ನನಗೆ ಇದು ಬೇಕು ಎಂದು ಬಯಸಿದವರಲ್ಲ, ಸಿನಿಮಾ ರಂಗಕ್ಕಾಗಿ ಕೆಲಸ ಮಾಡಿದವರು, ಅಂಬರೀಷ್ ದೇವರ ಮಗ ಎಂದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಈ ಸುಂದರ ಸ್ಮಾರಕ ನಿರ್ಮಾಣ ಆಗಿದೆ, ಅಂಬರೀಶ್ ಎಲ್ಲೇ ಇದ್ರೂ ಅವರಿಗೆ ಈಗ ಖುಷಿಯಾಗುತ್ತೆ. ಅವರು ಎಲ್ಲರ ಪ್ರೀತಿ ಪಡೆದಿದ್ದರು. ಅವರು ನಿಜಕ್ಕೂ ದೇವರ ಮಗ ಎಂದು ಸುಮಲತಾ ಕಣ್ಣೀರಿಟ್ಟರು. ಅಂಬರೀಶ್ ಅವರು ಯಾವತ್ತೂ ತಮಗಾಗಿ ಏನು ಬೇಕು ಅಂತ ಬಯಸಿದವರಲ್ಲ ಎಂದರು.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಂಬರೀಶ್ ಅವರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿದ್ದಾರೆ. 12 ಕೋಟಿ ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದಲ್ಲಿ ಅಂಬಿ ಸ್ಮಾರಸ ನಿರ್ಮಾಣವಾಗಿದ್ದು, . ಸ್ಮಾರಕ ಬಳಿ 32 ಅಡಿಯ ಅಂಬಿ ಪ್ರತಿಮೆ ಕೂಡ ಉದ್ಘಾಟನೆ ಆಗಿದೆ. ಒಂದು ಎಕರೆ 37 ಗುಂಟೆ ಜಾಗದಲ್ಲಿ ಅಂಬಿ ಸ್ಮಾರಕ ನಿರ್ಮಾಣ ಆಗಿದೆ.ನಟ ಅಂಬರೀಶ್ ಸ್ಮಾರಕ ನಿರ್ಮಾಣ ಅವರ ಅಭಿಮಾನಿಗಳ ಬಹುದಿನದ ಬೇಡಿಕೆಯಾಗಿತ್ತು. ಈ ಬೇಡಿಕೆ ಇಂದು ಅಧಿಕೃತವಾಗಿ ನಟ ಅಂಬರೀಶ್ ಸ್ಮಾರಕ ಲೋಕಾರ್ಪಣೆ ಮಾಡಿದ್ದಾರೆ.ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ಸ್ಮಾರಕ ಇಂದು (ಮಾ.27) ಕಂಠೀರವ ಸ್ಟುಡಿಯೋದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ ಆಗಿದೆ. ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ನಾಮಕರಣ ಮಾಡಿದ ಬಳಿಕ ಅಂಬಿ ಸ್ಮಾರಕ (Memorial) ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ.

ಅಂಬರೀಶ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ : ಸಿಎಂ ಬೊಮ್ಮಾಯಿ

ಕರ್ನಾಟಕದ ರೆಬಲ್ ಸ್ಟಾರ್, ಎಲ್ಲರ ಮನಸ್ಸನ್ನು ಗೆದ್ದಂತಹ ನೇರ ದಿಟ್ಟ ನಿರಂತರ ಶ್ರೀಮಾನ್ ಅಂಬರೀಶ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು.ಇಂದು ಮೌರ್ಯ ಸರ್ಕಲ್ ನಿಂದ ಬಸವೇಶ್ವರ್ ಸರ್ಕಲ್ ವರೆಗಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ.ಎಂ.ಹೆಚ್ ಅಂಬರೀಶ್ ರಸ್ತೆ ( Rebel Star Dr H M Ambareesh Road ) ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದ ಬಳಿಕ ಅವರು ಮಾತನಾಡಿದರು.ಅಂಬರೀಶ್ ಅವರ ನೆನಪಿಗಾಗಿ ಇವತ್ತು ರೇಸ್ ಕೋರ್ಸ್ ರಸ್ತೆಯನ್ನು ಅಂಬರೀಶ್ ಅವರ ಹೆಸರಿನಲ್ಲಿ ಅತ್ಯಂತ ಸಂತೋಷದಿಂದ ನಾಮಕರಣ ಮಾಡಿದ್ದೇವೆ.ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲ ಅಭಿಮಾನಿಗಳ ಒತ್ತಾಸೆ ಮೇರೆಗೆ ಇವತ್ತು ಇವರ ಹೆಸರನ್ನು ಇಟ್ಟಿದ್ದೇವೆ. ಹಲವು ಪ್ರತಿಭೆಯಿರುವ ಮೇರು ವ್ಯಕ್ತಿತ್ವ ಅವರದ್ದು. ಸಿನಿಮಾದಲ್ಲಿ ಸಹಜವಾಗಿ ನಟನೆ ಮಾಡುತ್ತಿದ್ದರು. ಜನರನ್ನು ಹಿಡಿದಿಟ್ಟುಕೊಳ್ಳುವ ವ್ಯಕ್ತಿತ್ವ ಅವರಿಗಿತ್ತು ಎಂದರು.ರೀಲ್ ಆಯಂಡ್ ರಿಯಲ್ ಲೈಫ್ ಎರಡು ಒಂದೆಯಾಗಿದ್ದು, ನೇರ ವ್ಯಕ್ತಿತ್ವ ಅವರದ್ದಾಗಿತ್ತು. ಕ್ರೀಡೆಯಲ್ಲೂ ಪ್ರತಿಭೆಯನ್ನು ಹೊಂದಿದ್ದ ಅವರು, ಸಾರ್ವಜನಿಕ ಜೀವನಕ್ಕೆ ಬಂದಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು. ಅಧಿಕಾರ ಅವರನ್ನು ಹುಡುಕಿಕೊಂಡು ಬರುತ್ತಿತ್ತು ಎಂದರು.

ನನಗೆ ಇವತ್ತು ಬಹಳ ಸಂತೋಷವಾಗಿದೆ. ಅಂಬರೀಶ್ ಅವರು ನನ್ನ ಮಿತ್ರರು. ಅವರ ಜೀವನ ತೆರೆದ ಪುಸ್ತಕ. ಹಲವಾರು ಬಾರಿ ಬೇಟಿಯಾಗಬೇಕು ಅಂದಾಗ ಅಲ್ಲೇ ರೇಸ್ ಕೋರ್ಸ್ ನಲ್ಲಿ ಇರುತ್ತೇನೆ ಬಾರಯ್ಯ ಎನ್ನುವವರು. ಅವರ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರು ಕೂಡ ಈ ರಸ್ತೆಗೆ ಸೂಕ್ತವಲ್ಲ. ಅವರ ಕುಟುಂಸ್ಥರು ಒಪ್ಪಿ ಬಂದಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದ ಸಿಎಂ ಬೊಮ್ಮಾಯಿ ಅಂಬರೀಶ್ ಅವರ ಸ್ಮಾರಕ ಕೂಡ ಉದ್ಘಾಟನೆ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ನಟ ರಾಘವೇಂದ್ರ ರಾಜ್ ಕುಮಾರ್, ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ , ರಾಕ್ ಲೈನ್ ವೆಂಕಟೇಶ್, ಚಿನ್ನೆಗೌಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.