ದೇಶದಲ್ಲಿ ಉತ್ಪಾದನ ಚಟುವಟಿಕೆ ಗರಿಷ್ಠಕ್ಕೆ ಏರಿಕೆ

ದೇಶದಲ್ಲಿ ಉತ್ಪಾದನ ಚಟುವಟಿಕೆ ಗರಿಷ್ಠಕ್ಕೆ ಏರಿಕೆ

ಹೊಸದಿಲ್ಲಿ: ದೇಶದಲ್ಲಿ ಉತ್ಪಾದನ ಚಟುವಟಿಕೆಗಳು ಮಾರ್ಚ್‌ನಲ್ಲಿ ಮೂರು ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿದೆ. ಹೀಗೆಂದು ಎಸ್‌ ಆಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಮಾನ್ಯುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಥ ವ್ಯವಸ್ಥೆಯ ಹಲವು ವಿಭಾಗಗಳಲ್ಲಿ ತೃಪ್ತಿದಾಯಕ ಬೆಳವಣಿಗೆಗಳು ಕಂಡುಬಂದಿವೆ ಮತ್ತು ಎಲ್ಲ ವಿಭಾಗಗಳಲ್ಲಿ ನಿರ್ವ ಹಣ ವ್ಯವಸ್ಥೆ ಸಮಾಧಾನಕರವಾಗಿದೆ ಎಂದಿದೆ.

ದೇಶದಲ್ಲಿ ಉತ್ಪಾದಿಸಲಾಗುವ ಸರಕುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ ಎಂದು ವರದಿ ಹೇಳಿದೆ.

ಫೆಬ್ರವರಿಯಲ್ಲಿ 55.3 ಇದ್ದ ಪಿಎಂಐ ಸೂಚ್ಯಂಕ ಮಾರ್ಚ್‌ನಲ್ಲಿ 56.4ಕ್ಕೆ ಏರಿಕೆಯಾಗಿದೆ. 2023ನೇ ಸಾಲಿಗೆ ಸಂಬಂಧಿಸಿದಂತೆ ಇದುವರೆಗಿನ ಪ್ರಬಲ ಸುಧಾರಣ ಸೂಚ್ಯಂಕ ಇದಾಗಿದೆ.