ಜಿ20 ಶೃಂಗಸಭೆ; ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವ ಹಂಪಿ ಸ್ಮಾರಕಗಳು

ಜಿ20 ಶೃಂಗಸಭೆ; ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವ ಹಂಪಿ ಸ್ಮಾರಕಗಳು

ಹೊಸಪೇಟೆ: ಭಾರತವು ಜಿ20 ಶೃಂಗಸಭೆಯ ಆತಿಥ್ಯ ವಹಿಸಿರುವುದರಿಂದ ವಿಶ್ವಪ್ರಸಿದ್ದ ಹಂಪಿ ಸ್ಮಾರಕಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಡಿ.7ರವರೆಗೆ ದೇಶದ ನೂರು ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿದ್ಯುತ್‌ ದೀಪಾಲಂಕಾರ ಇರಲಿದೆ. ಹಂಪಿ ವಿರೂಪಾಕ್ಷೇಶ್ವರ ದೇಗುಲ, ಕಡಲೆಕಾಳು ಗಣಪ, ಹೇಮಕೂಟ, ಸಾಸಿವೆಕಾಳು ಗಣಪ, ಕಮಲ ಮಹಲ್‌ ಪ್ರಮುಖ ಸ್ಮಾರಕಗಳು ವಿದ್ಯುತ್‌ ದೀಪಗಳಿಂದ ಜಗಮಗಿಸುತ್ತಿವೆ. ಎಲ್ಲಾ ಸ್ಮಾರಕಗಳ ಬಳಿ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ಜಿ20 ಶೃಂಗಸಭೆಯ ವಿವರ ಅದರಲ್ಲಿದೆ