ಗುಪ್ತವಾರ್ತೆ ಉಪನಿರ್ದೇಶಕರ ಆದೇಶಕ್ಕಿಲ್ಲ ಬೆಲೆ! ತೆರವಿಗೆ ಮುಂದಾಗದ ಎಸ್ಪಿ!

ಗುಪ್ತವಾರ್ತೆ ಉಪನಿರ್ದೇಶಕರ ಆದೇಶಕ್ಕಿಲ್ಲ ಬೆಲೆ! ತೆರವಿಗೆ ಮುಂದಾಗದ ಎಸ್ಪಿ!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಮೈಸೂರು ವಿಭಾಗದ ರಾಜ್ಯ ಗುಪ್ತವಾರ್ತೆ ಉಪನಿರ್ದೇಶಕರು ಹೊರಡಿಸಿದ ಆದೇಶಕ್ಕೆ ಚಾಮರಾಜನಗರ ಪೊಲೀಸ್ ಇಲಾಖೆಯಲ್ಲಿ ಬೆಲೆ ಇಲ್ಲದೆ ಕಾಟಾಚಾರಕ್ಕೆ ಜಾರಿ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ಹಿಂಪಡೆದುಕೊಂಡು ಸಿವಿಲ್ ನಾಗರೀಕ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸುವಂತೆ 2022 ರ ನವೆಂಬರ್ 2 ರಂದು ಸ್ಪಷ್ಟ ಆದೇಶ ಹೊರಡಿಸಿದ್ದರು ಚಾಮರಾಜನಗರ ಪೊಲೀಸ್ ಅದೀಕ್ಷಕರು ಮಾತ್ರ ನಮಗೂ ಇದಕ್ಕೂ ಸಂಬಂದ ಇಲ್ಲ ಎಂಬಂತೆ ಮೌನವಾಗಿ ಉಳಿದಿದ್ದಾರೆ‌.

ರಾಜ್ಯ ಪ್ರಧಾನ ಗುಪ್ತಚಾರ ಇಲಾಖೆ ನಿರ್ದೇಶಕರ ಕಛೇರಿಯ ಸ್ಥಾಯಿ ಆದೇಶ ಸ್ಪಷ್ಟವಾಗಿ ಇದ್ದರೂ ಏಳೆಂಟು ಸಿಬ್ಬಂದಿಗಳನ್ನ ನಿಯೋಜಿಸಿಕೊಂಡಿದ್ದು ಅದರಲ್ಲಿ ಎರಡು ಮೂವರನ್ನ ನೆಪಮಾತ್ರಕ್ಕೆ ಬಿಡುಗಡೆಗೊಳಿಸಿ ಸುಮ್ಮನಾಗಿದ್ದಾರೆ‌.

ಚಾಮರಾಜನಗರ ಜಿಲ್ಲಾ ಘಟಕಕ 02 ಎಂಎಸ್‌ಐ 05 ಸಿಹೆಚ್‌ಸಿ 03 ಸಿಪಿಸಿ ಹುದ್ದೆಗಳ ಮಂಜೂರಾತಿ ಬಲದಲ್ಲಿ ಈ ಕೆಳಕಂಡ ಜಿಲ್ಲಾ, ಸಶತ್ರ ಮೀಸಲು ಪಡೆಯ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇವರನ್ನು ವಾಪಸ್ಸು ಹಿಂಪಡೆದುಕೊಂಡು ಪ್ರಧಾನ ಕಛೇರಿ ಆದೇಶ ಪ್ರಕಾರ ಸಿಎಲ್‌ ನಾಗರೀಕ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಹುದ್ದೆಗಳನ್ನು ನಿಯೋಜಿಸಿಕೊಡುವಂತೆ ಕೋರಿದ್ದಾರೆ. ಆದರೆ ಆದೇಶವಾಗಿ ಮೂರು ತಿಂಗಳಾದರೂ ಪೂರ್ಣಪ್ರಮಾಣದಲ್ಲಿ ಬಿಡುಗಡೆ ಮಾಡಲು ಚಾಮರಾಜನಗರ ಪೊಲೀಸ್ ಅದೀಕ್ಷಕರಿಗೆ ಮಾತ್ರ ಮನಸ್ಸಿಲ್ಲದಂತಾಗಿದೆ.

ಶಸಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳನ್ನ ವಾಪಸ್ ಕರೆಸಿಕೊಳ್ಳುವಲ್ಲಿ ಶಸಸ್ತ್ರ ಮೀಸಲು ಪಡೆಯ ಡಿವೈಸ್ಪಿ ಅವರು ಪೂರ್ಣ ಜವಬ್ದಾರರಾಗಿದ್ದರೂ ಅವರಿಗೂ ಕೂಡ ಇದು ಬೇಡವಾದ ವಿಚಾರವಾಗಿ ಸುಮ್ಮನಾಗಿದ್ದಾರೆ. ಈಗಾಗಲೇ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೆ ಮಾದ್ಯಮದವರು ವರ್ಗಾವಣೆ ದಂದೆ ನಡೆಯುತ್ತಿದರ ಬಗ್ಗೆ ಗಣರಾಜ್ಯೋತ್ಸವ ದಿನದಂದು ಪ್ರಸ್ತಾಪಿಸಿದ್ದು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು ಎಂದು ಸಬೂಬು ನೀಡಿ ನುಣುಚಿಕೊಂಡರು