ಕೊಲೆ ಮಾಡಿ ಬೈಕ್‌ನಲ್ಲಿ ಹೆಣ ಸಾಗಿಸಿದ ಹಂತಕರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಬೆಂಗಳೂರು: ಕೊಲೆ ಮಾಡಿ ಬೈಕ್ ನಲ್ಲೇ ಹೆಣ ಸಾಗಿಸಿದ್ದ ಖತರ್ನಾಕ್ ಆರೋಪಿಗಳನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ದಂಪತಿ ರೀನಾ, ಬಿಜೋಯ್ ಹಾಗೂ ಸ್ನೇಹಿತ ಗಂಗೇಶ್ ಬಂಧಿತ ಆರೋಪಿಗಳಾಗಿದ್ದು, ಕಳೆದ‌ 3ನೇ ತಾರೀಖು ನಿಬಾಶೀಸ್ ಪಾಲ್ ನ ಕೊಲೆ ಮಾಡಿ ಆರೋಪಿಗಳು ಶವ ಬಿಸಾಕಿ ಹೋಗಿದ್ದರು.

ಕೊಲೆ ಮಾಡಿದ‌ ನಂತರ ಬೈಕ್ ನಲ್ಲಿ ತ್ರಿಬಲ್ ರೈಡ್ ಮಾಡಿ ಹೆಣ ಸಾಗಾಟ ಮಾಡಿದ್ದ ಆರೋಪಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಶವ ಬಿಸಾಕಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಇದಾದ‌ ನಂತರ ಶವ ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಆರೋಪಿಗಳು ಬಲೆಗೆ ಬಿದ್ದಿದ್ದು, ಹಣದಾಸೆಗೆ ಸೆರಗು ಹಾಸು ಎಂದವನ ಕೊಲೆ ಮಾಡಿದ್ದ ರಹಸ್ಯ ಬಯಲಾಗಿದೆ‌. ಕೊಲೆಯಾದ ನಿಬಾಶಿಸ್ ಪಾಲ್ ಮತ್ತು ಆರೋಪಿ ರೀನಾ ಮಧ್ಯೆ ದೈಹಿಕ ಸಂಬಂಧ ಇತ್ತಂತೆ.ಇದೇ ಕಾರಣಕ್ಕೆ ಪತಿ ಗಂಗೇಶ್ ಆಕೆಯನ್ನು ಬಿಟ್ಟು ವೆಸ್ಟ್ ಬೆಂಗಾಲ್ ಗೆ ಹೋಗಿದ್ದ.ಗಂಗೇಶ್ ಬಿಟ್ಟು ಹೋದ ಮೇಲೆ ರೀನಾಗೆ ಕಾಟ ಕೊಡುತ್ತಿದ್ದ ಪಾಲ್,ಹೆಚ್ಚಿನ ಹಣಕ್ಕಾಗಿ ಬೇರೆಯವರ ಜೊತೆ ಮಲಗುವಂತೆ ಕಿರುಕುಳ ಕೊಟ್ಟಿದ್ದ.
ಈ ಬಗ್ಗೆ ರೀನಾ ಕಣ್ಣೀರು ಹಾಕಿ ಗಂಡನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಳು.

ಕೂಡಲೇ ಬೆಂಗಳೂರಿಗೆ ಬಂದ ಗಂಗೇಶ್ ಸ್ನೇಹಿತ ಬಿಜೋಯ್ ಜೊತೆ ಸೇರಿ ಪಾಲ್ ನ ಕೊಲೆ ಮಾಡಿದ್ದಾನೆ. ಕೊಲೆ‌ ಮಾಡಿ ಬೈಕ್ ನಲ್ಲೇ ಆರೋಪಿಗಳು ಶವ ಸಾಗಿಸಿ‌ ನೈಸ್ ರಸ್ತೆಯಲ್ಲಿ ಎಸೆದಿದ್ದರು. ಸದ್ಯ ಮೂವರನ್ನೂ ಬಂಧಿಸಿ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆ ನಡಸುತ್ತಿದ್ದಾರೆ.