'ಕೊರೋನಾ ಲಸಿಕೆ'ಯಲ್ಲಿ ಹೊಸ ದಾಖಲೆ ಬರೆದ ಕರ್ನಾಟಕ: ಶೇ.99.9 ಜನರಿಗೆ ಮೊದಲ ಡೋಲ್ ನೀಡಿಕೆ

'ಕೊರೋನಾ ಲಸಿಕೆ'ಯಲ್ಲಿ ಹೊಸ ದಾಖಲೆ ಬರೆದ ಕರ್ನಾಟಕ: ಶೇ.99.9 ಜನರಿಗೆ ಮೊದಲ ಡೋಲ್ ನೀಡಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ( Coronavirus ), ಓಮಿಕ್ರಾನಾ ಸೋಂಕು ( Omicron Variant ) ಹೆಚ್ಚಾಗುತ್ತಿರುವಂತ ಸಂದರ್ಭದಲ್ಲಿಯೇ, ಲಸಿಕಾಕರಣವನ್ನು ಹೆಚ್ಚುಗೊಳಿಸೋದಕ್ಕೆ ಕೇಂದ್ರ ಸರ್ಕಾರದ ಸೂಚನೆ ಮೇರೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಈ ಅಂಗವಾಗಿಯೇ ಇದೀಗ ಮೊದಲ ಡೋಸ್ ಲಸಿಕೆಯನ್ನು ( First Dose of Corona Vaccine ) ರಾಜ್ಯದ ಶೇ.99.9ರಷ್ಟು ಜನರಿಗೆ ನೀಡಿ, ಹೊಸ ದಾಖಲೆ ಬರೆದಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್ ( Minister Dr K Sudhakar ) ಅವರು ರಾಜ್ಯ ಸರ್ಕಾರ ಲಸಿಕಾಕರಣದಲ್ಲಿ ಹೊಸ ದಾಖಲೆ ಬರೆದಿದೆ. ಮೊದಲ ಡೋಸ್ ಲಸಿಕೆಯನ್ನು ಶೇ.99.9ರಷ್ಟು ಜನರಿಗೆ ನೀಡಲಾಗಿದೆ. ಶೇ.0.1ರಷ್ಟು ಲಸಿಕೆ ( Vaccination Drive ) ನೀಡಿಕೆ ಬಾಕಿ ಇದೆ. ಈ ಲಸಿಕೆಯನ್ನು ನೀಡಿದ್ರೇ.. ಕರ್ನಾಟಕ ಶೇ.100ರಷ್ಟು ಮೊದಲ ಡೋಸ್ ಲಸಿಕೆ ನೀಡಿದ ರಾಜ್ಯ ಎಂಬ ಪಟ್ಟಿಯನ್ನು ಸೇರಲಿದೆ ಎಂದು ತಿಳಿಸಿದ್ದಾರೆ.