ಕೆಇಎಯಿಂದ ವಿವಿಧ ಪರೀಕ್ಷೆಗೆ ವಸ್ತ್ರ ಸಂಹಿತೆ ಜಾರಿ: ಕಿವಿಯೋಲೆ, ಉಂಗುರ, ನೆಕ್ಲೆಸ್, ಹೀಲ್ಡ್ ಚಪ್ಪಲಿಗೆ ಬ್ರೇಕ್
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಜನವರಿ 29ರಿಂದ ಫೆಬ್ರವರಿ 12ರವರೆಗೆ ವಿವಿಧ ಪರೀಕ್ಷೆಗಳನ್ನು ನಿಗದಿ ಪಡಿಸಿದೆ. ಈ ಪರೀಕ್ಷೆಗೆ ಹಾಜರಾಗುವಂತ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಅಲ್ಲದೇ ಆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.
ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವಂತ ಕೆಇಎಯು ಜ.29ರಿಂದ ಫೆ.19ರವರೆಗೆ ನಡೆಯಲಿರುವಂತ ವಿವಿಧ ಪರೀಕ್ಷೆಗಳಿಗೆ ಹಾಜರಾಗುವಂತೆ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಕಿವಿಯೋಲೆ, ಪುರುಷ ಅಭ್ಯರ್ಥಿಗಳು ಕುರ್ತಾ ಸೇರಿದಂತೆ ವಿವಿಧ ವಸ್ತ್ರಗಳನ್ನು ಧರಿಸಿ ಬರೋದಕ್ಕೆ ನಿಷೇಧ ಹೇರಲಾಗಿದೆ.
ಮಹಿಳಾ ಅಭ್ಯರ್ಥಿಗಳು ಕಿವಿಯೋಲೆ, ನೆಕ್ಲೆಸ್, ಉಂಗುರ ಧರಿಸಿ ಬರಬಾರದು. ಇದಲ್ಲದೇ ಹೈ ಹೀಲ್ಡ್ ಚಪ್ಪಲಿ ಹಾಕಿಕೊಂಡು ಬಂದರೇ ಪರೀಕ್ಷೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಪುರುಷ ಅಭ್ಯರ್ಥಿಗಳು ಪೈಜಾಮ, ಕುರ್ತಾ ಧರಿಸಿ ಬಂದು ಪರೀಕ್ಷೆಗೆ ಬರೆಯಲು ಅನುಮತಿ ಇಲ್ಲ. ತೊಡುವಂತ ಬಟ್ಟೆಯು ಹಗುರ, ಹೆಚ್ಚು ಜಿಪ್ ಪಾಕೆಟ್, ದೊಡ್ಡ ಬಟನ್, ಕಸೂತಿ ಇಲ್ಲದಂತೆ ಇರಬೇಕು ಎಂದು ತಿಳಿಸಿದೆ.
ಇನ್ನೂ ಅರ್ಧ ತೋಳಿದ ಶರ್ಟ್ ಧರಿಸಿ ಬರುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಡಿಜಿಟಲ್ ಉಪಕರಣ ಕೊಂಡೊಯ್ಯಬಾರಪದು. ನೀರಿನ ಬಾಟಲಿ ತೆಗೆದುಕೊಂಡು ಬರಬಾರದು. ಪ್ರವೇಶ ಪತ್ರ ಇಲ್ಲದೇ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.