ಭಾರತದಲ್ಲಿ ಶಾಂತಿ ಕದಡಲು ಸಂಚು ರೂಪಿಸಿದ್ದ ಬೆಂಗಳೂರಿನ ಇಬ್ಬರು ಶಂಕಿತ ಉಗ್ರರ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು: ಉಗ್ರರ ಜೊತೆಗೆ ನಂಟು, ಭಾರತದಲ್ಲಿ ಶಾಂತಿ ಕದಡಲು ಸಂಚು ರೂಪಿಸಿದ್ದಂತ ಆರೋಪದ ಹಿನ್ನಲೆಯಲ್ಲಿ, ತಿಲಕ್ ನಗರದ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಸಿದ್ದಾರೆ.
ತಿಲಕ್ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಂತ ಅಖ್ತರ್ ಹುಸೇನ್, ಅಲಿಮ್ ಮಂಡಲ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿದ್ದರು. ಈ ಮೂಲಕವೇ ಉಗ್ರ ಚಟುವಟಿಕೆಗೆ ಸ್ಥಳೀಯ ಯುವಕರನ್ನು ಪ್ರೇರೇಪಿಸುತ್ತಿದ್ದರು.
ಇದಷ್ಟೇ ಅಲ್ಲದೇ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಆಲ್ ಖೈದಾದೊಂದಿಗೂ ಸಂಪರ್ಕವನ್ನು ಈ ಶಂಕಿತ ಉಗ್ರರು ಹೊಂದಿದ್ದರು ಎಂಬುದಾಗಿ ಎನ್ಐಎ ಸಲ್ಲಿಸಿರುವಂತ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಅಂದಹಾಗೇ ಕಳೆದ ಜುಲೈ 24ರಂದು ಬೆಂಗಳೂರಿನ ತಿಲಕ್ ನಗರದಲ್ಲಿ ಡೆಲಿವರಿ ಬಾಯ್ ಗಳಂತೆ ಕೆಲಸ ಮಾಡುತ್ತ, ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಖಚಿತ ಮಾಹಿತಿಯ ಮೇರೆಗೆ, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸರ್ಕಾರ ಎನ್ಐಎಗೆ ವರ್ಗಾವಣೆ ಮಾಡಿತ್ತು. ಈ ಕೇಸ್ ನಲ್ಲಿಯೇ ಈಗ ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.