ಕುರುಡು ನಂಬಿಕೆ; ʻನ್ಯುಮೋನಿಯಾʼದಿಂದ ಬಳಲುತ್ತಿದ್ದ 3 ತಿಂಗಳ ಮಗುವಿಗೆ ಕಾದ ಕಬ್ಬಿಣದಿಂದ 51 ಬಾರಿ ಬರೆ, ಕಂದಮ್ಮ ಸಾವು

ಶಾಹದೋಲ್: ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಬಾಲಕಿಯ ಹೊಟ್ಟೆಯ ಮೇಲೆ ಚಿಕಿತ್ಸೆಯ ಭಾಗವಾಗಿ ಕಾದ ಕಬ್ಬಿಣದ ರಾಡ್‌ನಿಂದ 51 ಬಾರಿ ಬರೆ ಹಾಕಲಾಗಿದ್ದು, ಮಗು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮಗು ನ್ಯುಮೋನಿಯಾದಿಂದ ಬಳಲುತ್ತಿತ್ತು. ತಂತ್ರಿಯೊಬ್ಬರು ನ್ಯುಮೋನಿಯಾಗೆ ಕಾದ ಕಬ್ಬಿಣದ ರಾಡ್‌ನಿಂದ 51 ಬಾರಿ ಬರೆ ಹಾಕಿದರೆ, ಬೇಗ ಗುಣವಾಗುವುದು ಎಂದು ಹೇಳಿದ್ದರು. ಈ ಮಾತನ್ನು ನಂಬಿ ಪೋಷಕರು ಮಗುವಿಗೆ 51 ಬಾರಿ ಕಾದ ಕಬ್ಬಿಣದ ರಾಡ್‌ನಿಂದ ಬರೆ ಹಾಕಿದ್ದಾರೆ.
ಆದ್ರೆ, ಮಗು ಸ್ಥಿತಿ ಇನ್ನೂ ಹದಗೆಟ್ಟಿತು. ಹೀಗಾಗಿ, ಪೋಷಕರು ಮಗುವನ್ನು ಶಾಹದೋಲ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಆದ್ರೆ, ಅಲ್ಲಿ ಮಗುವಿಗೆ ಚಿಕಿತ್ಸೆ ಫಲಕಾರಿಯಾಗದೇ ಅದು ಸಾವನ್ನಪ್ಪಿದೆ.
ಮರಣೋತ್ತರ ಪರೀಕ್ಷೆಗಾಗಿ ಸಮಾಧಿ ಮಾಡಿರುವ ಆಕೆಯ ಶವವನ್ನು ಇಂದು (ಶನಿವಾರ) ಹೊರತೆಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಅನೇಕ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ನ್ಯುಮೋನಿಯಾಗೆ ಚಿಕಿತ್ಸೆಯ ಭಾಗವಾಗಿ ಬಿಸಿ ಕಬ್ಬಿಣದ ರಾಡ್‌ನಿಂದ ಚುಚ್ಚುವ ಅಭ್ಯಾಸ ಸಾಮಾನ್ಯವಾಗಿದೆ.