ಕಾಶ್ಮೀರದಲ್ಲಿ 30 'ಆರ್ಎಸ್ಎಸ್' ನಾಯಕರಿಗೆ ಭಯೋತ್ಪಾದಕ ಗುಂಪಿನಿಂದ ಜೀವ ಬೆದರಿಕೆ, ತನಿಖೆಗೆ ಸರ್ಕಾರ ಸೂಚನೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಹಲವು ಸದಸ್ಯರಿಗೆ 'ದಿ ರೆಸಿಸ್ಟೆನ್ಸ್ ಫ್ರಂಟ್' ಎಂಬ ಭಯೋತ್ಪಾದಕ ಗುಂಪು ಜೀವ ಬೆದರಿಕೆ ಹಾಕಿದೆ. ಈ ಗುಂಪು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದ ಭಾಗವಾಗಿದ್ದು, ಜನವರಿಯಲ್ಲಿ ಪಾಕ್ ಸರ್ಕಾರವು ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಖಂಡ ಭಾರತದ ಕಲ್ಪನೆ ಕುರಿತಂತೆ ಹೇಳಿಕೆ ನೀಡಿದ ಬಳಿಕ ಘಟನೆ ನಡೆದಿದ್ದು, ಕಾಶ್ಮೀರ ಭಯೋತ್ಪಾದಕ ಗುಂಪು ತನ್ನ ಗುರಿಯಲ್ಲಿರುವ 30 ಆರ್ಎಸ್ಎಸ್ ನಾಯಕರ ಪಟ್ಟಿಯನ್ನು ದಕ್ಷಿಣ ಮತ್ತು ಉತ್ತರ ಕಾಶ್ಮೀರ ಮತ್ತು ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಯು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.
ಆರ್ಎಸ್ಎಸ್ನೊಂದಿಗೆ ಸಂಬಂಧ ಹೊಂದಿರುವ ಬಹುಪಾಲು ಮುಸ್ಲಿಂ ಮುಖಂಡರಿಗೆ ಟಿಆರ್ಎಫ್ ಬೆದರಿಕೆ ಹಾಕಿದೆ. ಬೆದರಿಕೆ ಕುರಿತಂತೆ ಪರಿಶೀಲಿಸುತ್ತಿದ್ದೇವೆ ಎಂದು ಭಾರತ ಸರ್ಕಾರದ ಹಿರಿಯ ಕಾರ್ಯಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದು ಕೇವಲ ಸಾಮಾಜಿಕ ಮಾಧ್ಯಮದ ಅಸ್ತ್ರೀಕರಣವಾಗಿದೆ. ಟಿಆರ್ಎಫ್ನಂತಹ ಸಂಸ್ಥೆಗಳು ಸುಳ್ಳು ಪ್ರಚಾರವನ್ನು ಸೃಷ್ಟಿಸಲು ಬಯಸುತ್ತಿವೆ. ಪಟ್ಟಿಯಲ್ಲಿ ಯಾವುದೇ ದೊಡ್ಡ ವ್ಯಕ್ತಿಯ ಹೆಸರಿಲ್ಲ. ಇಂತಹ ಭಯೋತ್ಪಾದಕ ಸಂಘಟನೆಗಳು ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಹತ್ತಿರವಿರುವವರಿಗೆ ಬೆದರಿಕೆ ಹಾಕುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.
ಏಪ್ರಿಲ್ 1 ರಂದು ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಹೇಮು ಕಲಾನಿ ಅವರ 100 ನೇ ಜನ್ಮದಿನದ ಗೌರವಾರ್ಥ ಸಮಾರಂಭದಲ್ಲಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಪಾಕಿಸ್ತಾನದ ಜನರು ಅತೃಪ್ತರಾಗಿದ್ದಾರೆ. ಈಗ ಭಾರತದ ವಿಭಜನೆಯನ್ನು ತಪ್ಪಾಗಿ ಭಾವಿಸುತ್ತಿದ್ದಾರೆ. ಅಖಂಡ ಭಾರತ ನಿಜವಾಗಿದ್ದರೂ ದುಃಸ್ವಪ್ನವಾಗಿದೆ ಎಂದು ಹೇಳಿದ್ದರು.