ಮುಂಬೈನಲ್ಲಿ 'ತಾಲಿಬಾನ್' ಭಯೋತ್ಪಾದಕ ದಾಳಿ ಬೆದರಿಕೆ ; ಎನ್‌ಐಎ -ಪೊಲೀಸರಿಂದ ಜಂಟಿ ತನಿಖೆ ಆರಂಭ

ಮುಂಬೈನಲ್ಲಿ 'ತಾಲಿಬಾನ್' ಭಯೋತ್ಪಾದಕ ದಾಳಿ ಬೆದರಿಕೆ ; ಎನ್‌ಐಎ -ಪೊಲೀಸರಿಂದ ಜಂಟಿ ತನಿಖೆ ಆರಂಭ

ಮುಂಬೈ: ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ತಾಲಿಬಾನ್ ಸದಸ್ಯ ಎಂದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಮೇಲ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಎನ್‌ಐಎ ಜಂಟಿ ತನಿಖೆಯನ್ನು ಪ್ರಾರಂಭಿಸಿದೆ.

ಕೇಂದ್ರ ತನಿಖಾ ಸಂಸ್ಥೆಯು ಮುಂಬೈ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರದ ಹಲವು ನಗರಗಳನ್ನು ಅಲರ್ಟ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಮೂಲಗಳ ಪ್ರಕಾರ, ಎನ್‌ಐಎಯ ಇ-ಮೇಲ್ ಐಡಿಗೆ ಬೆದರಿಕೆ ಮೇಲ್ ಬಂದಿದ್ದು, ಅದರಲ್ಲಿ ನಗರದಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆ ಇದೆ. ಇ-ಮೇಲ್ ಕಳುಹಿಸಿದವನು ತನ್ನನ್ನು ತಾಲಿಬಾನಿ ಎಂದು ಬಣ್ಣಿಸಿದ್ದು, ಇದು ಪ್ರಮುಖ ತಾಲಿಬಾನ್ ನಾಯಕ ಸಿರಾಜುದ್ದೀನ್ ಹಕ್ಕಾನಿ ಅವರ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.