ಎಚ್‌ಎಂಟಿ ಫ್ಯಾಕ್ಟರಿ ಹಿಂಭಾಗದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು; ಮೂವರು ಬಚಾವ್

ಕೋಲಾರ: ಕೆಜಿಎಫ್‌ನ ಬಿಇಎಂಎಲ್‌ನ ಎಚ್‌ಎಂಟಿ ಫ್ಯಾಕ್ಟರಿ ಹಿಂಭಾಗದ ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಮುಳುಗಿ ಮೃತಪಟ್ಟಿದ್ದಾನೆ.
೧೬ ವರ್ಷದ ಪ್ರದೀಪ್ ಮೃತ ವಿದ್ಯಾರ್ಥಿ. ಕೆಜಿಎಫ್‌ನ ಕೊರಮಂಡಲ ನಿವಾಸಿಯಾಗಿದ್ದಾನೆ. ಈತ ಕೆಜಿಎಫ್‌ನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.
ಶನಿವಾರವಾಗಿದ್ದರಿಂದ ಸ್ನೇಹಿತರ ಜತೆಗೆ ಈಜಲು ತೆರಳಿದ್ದ. ಈ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಪ್ರದೀಪ್ ತನ್ನ ಸ್ನೇಹಿತರೊಂದಿಗೆ ಎಚ್‌ಎಂಟಿ ಫ್ಯಾಕ್ಟರಿ ಹಿಂಭಾಗ ಈಜಲು ತೆರಳಿದ್ದ. ಅವರ ಜತೆ ಈಜುತ್ತಿದ್ದಾಗ ಸುಸ್ತಾಗಿ ಮುಳುಗಿದ್ದಾನೆ ಎನ್ನಲಾಗಿದೆ.
ಈತನನ್ನು ರಕ್ಷಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
ಈತನ ಜತೆಗಿದ್ದ ಮೂವರು ವಿದ್ಯಾರ್ಥಿಗಳು ಈಜಿ ದಡ ಸೇರಿ ಬಚಾವಾಗಿದ್ದಾರೆ.
ಬಿಜಿಎಂಎಲ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ, ಮೂವರು ಸ್ನೇಹಿತರಿಂದ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ.
ಪೊಲೀಸರು ಹಾಗೂ ಮುಳುಗು ತಜ್ಞರು ಕೆರೆಯಲ್ಲಿ ಬಹಳ ಹೊತ್ತು ಶೋಧ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.