ಇಂದು ಗುತ್ತಿಗೆದಾರರ ಸಭೆ; ಬಿಜೆಪಿಗೆ ತಲೆನೋವಾಗುತ್ತಾ
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕಚೇರಿಯಲ್ಲಿಇಂದು ಮಧ್ಯಾಹ್ನ 12ಕ್ಕೆ ಕೆಂಪಣ್ಣ ನೇತೃತ್ವದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಸುದ್ದಿಗೋಷ್ಠಿ ನಡೆಯಲಿದ್ದು, ಎಲ್ಲ ಜಿಲ್ಲೆಯ ಅಧ್ಯಕ್ಷರು ಭಾಗಿಯಾಗಲಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಬಗ್ಗೆ ಸಂಘ ಆರೋಪಿಸಿತ್ತು. ಸರ್ಕಾರದಿಂದ 20,000 ಕೋಟಿ ರೂ. ಬಿಲ್ ಬಾಕಿ ಇರುವ ಹಿನ್ನಲೆ ಈ ಸಭೆ ಕರೆದಿರುವ ಸಾಧ್ಯತೆಯೂ ಇದೆ. ಚುನಾವಣೆ ಹತ್ತಿರವಿರುವ ಸಂದರ್ಭ ಇಂಥ ಸನ್ನೀವೇಶಗಳು ಪಕ್ಷದ ಮೇಲೆ ಪರಿಣಾಮ ಬೀರಬಹುದಾ ಎಂಬ ಪ್ರಶ್ನೆ ಉದ್ಭವವಾಗಿದೆ.