ಇಂದು 'ಹಾಕಿ ಮಾಂತ್ರಿಕ' ಮೇಜರ್ ಧ್ಯಾನಚಂದ್ ಪುಣ್ಯಸ್ಮರಣೆ

ಇಂದು ಭಾರತದ 'ಹಾಕಿ ಮಾಂತ್ರಿಕ' ಎಂದು ಕರೆಯಲ್ಪಡುವ ಮೇಜರ್ ಧ್ಯಾನಚಂದ ಅವರ ಪುಣ್ಯಸ್ಮರಣೆ. ತಮ್ಮ ಅದ್ಭುತ ಗೋಲುಗಳಿಸುವ ಕುಶಲತೆಗೆ & ಚೆಂಡಿನ ಮೇಲೆ ಅವರಿಗಿದ್ದ ನಿಯಂತ್ರಣದ ಮೇಲಿನ ಪಾಂಡಿತ್ಯಕ್ಕೆ ಧ್ಯಾನಚಂದ್ ಜನಪ್ರಿಯರಾಗಿದ್ದರು. ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದು, ಅವರ ಕೊಡುಗೆಯನ್ನು ಗುರುತಿಸಿದ ಭಾರತ ಸರ್ಕಾರವು 1956 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ಅವರಿಗೆ ನೀಡಿ ಸನ್ಮಾನಿಸಿತು.