ಆರೋಗ್ಯ ಸಮಸ್ಯೆಯ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ

ಆರೋಗ್ಯ ಸಮಸ್ಯೆಯ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ನನಗೆ, ಆರೋಗ್ಯದಲ್ಲಿ ಸಮಸ್ಯೆಯಿದೆ. ಆದ್ರೆ ದೊಡ್ಡ ಪರಿಣಾಮವೇನು ಬೀರಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಜಿಲ್ಲೆಯ 7 ದಿನಗಳ ಪ್ರವಾಸ ಬಹಳ ಚೆನ್ನಾಗಿ ನಡೆದಿದೆ, ಜನರಿಂದ ಅಧ್ಬುತ ಪ್ರತಿಕ್ರಿಯೆ ಸಿಕ್ಕಿದೆ ಎಂದರು

ಮಂಡ್ಯದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ನನಗೆ ಸರಿಯಾಗಿ ನಿದ್ದೆಯಿಲ್ಲ, ಸ್ವಲ್ಪ ಆರೋಗ್ಯದಲ್ಲಿ ಸಮಸ್ಯೆ ಇದೆ. ಆದ್ರೆ ದೊಡ್ಡ ಪರಿಣಾಮವೇನು ಬೀರಿಲ್ಲ. ಶ್ರಮ ಪಟ್ಟರೆ ಪ್ರತಿಫಲ ಸಿಗುತ್ತದೆ ಎಂದಷ್ಟೇ ಹೇಳಿದ್ದು, ಆರೋಗ್ಯ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಕುಮಾರಸ್ವಾಮಿ ನೀಡಿಲ್ಲ, ಜಿಲ್ಲೆಯ ಪಂಚರತ್ನ ಯಾತ್ರೆ ಬಹಳ ಚೆನ್ನಾಗಿ ನಡೆದಿದೆ, ಜನರಿಂದ ಅಧ್ಬುತ ಪ್ರತಿಕ್ರಿಯೆ ಸಿಕ್ಕಿದೆ ಎಂದರು.