DTDC ಕೊರಿಯರ್‌ ಶಾಪ್‌ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣ : 'ಇದು ಭಯೋತ್ಪಾದನೆಯ ಒಂದು ಭಾಗ ' : ಪ್ರಮೋದ್‌ ಮುತಾಲಿಕ್‌ ಕಿಡಿ

DTDC ಕೊರಿಯರ್‌ ಶಾಪ್‌ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣ : 'ಇದು ಭಯೋತ್ಪಾದನೆಯ ಒಂದು ಭಾಗ ' : ಪ್ರಮೋದ್‌ ಮುತಾಲಿಕ್‌ ಕಿಡಿ

ಚಿಕ್ಕಮಗಳೂರು : ಡಿಟಿಡಿಸಿ ಕೊರಿಯರ್‌ ಶಾಪ್‌ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮಾತನಾಡಿ ʻಇದು ಭಯೋತ್ಪಾದನೆಯ ಒಂದು ಭಾಗ ಎಂದು ಕಿಡಿಕಾರಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರೀಕ್‌ ಮೂಲಕ ಕುಕ್ಕರ್‌ ಬಾಂಬ್‌ ಸ್ಪೋಟಿಸಲು ಪ್ರಯತ್ನಿಸಿದ್ದಾರೆ. ಇಂತಹ ಅನೇಕ ಕೃತ್ಯಗಳನ್ನು ನಮ್ಮ ಪೊಲೀಸರು ತಡೆಯಬೇಕು ಇಂತಹ ಅನೇಕ ಕೃತ್ಯಗಳನ್ನು ನಮ್ಮ ಪೊಲೀಸರು ತಡೆಯಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕೊರಿಯರ್ ಶಾಪ್​​ವೊಂದರಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ ಕೊರಿಯರ್​​ನಲ್ಲಿ ಬಂದಿದ್ದ ಮಿಕ್ಸಿಯನ್ನು ತೆರೆಯುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬ್ಲಾಸ್ಟ್‌ ಆದ ಸುತ್ತಮುತ್ತಲಿನ ಪೊಲೀಸರು ಅಂಗಡಿ ಬಂದ್‌ ಮಾಡಿಸಿದ್ದಾರೆ.ಅಲ್ಲಿಗೆ ಯಾರು ಪ್ರವೇಶಿಸದಂತೆ ಬ್ಯಾರಿಕೇಡ್‌ ಪೊಲೀಸರು ಅಳವಡಿಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ತಜ್ಞರ ತಂಡ ಭೇಟಿ ನೀಡಿದ್ದಾರೆ.