ಅಫ್ಘಾನಿಸ್ತಾನದಲ್ಲಿ ಮೈ ಕೊರೆಯುವ 'ಚಳಿಗೆ 160 ಕ್ಕೂ ಹೆಚ್ಚು ಜನರು ಸಾವು

ಕಾಬೂಲ್: ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದುವರೆದ ಮೈ ಕೊರೆಯುವ ಚಳಿಗೆ ಅಫ್ಘಾನಿಸ್ತಾನದಲ್ಲಿ 160 ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆಂದು ಗುರುವಾರವಿಪತ್ತು ನಿರ್ವಹಣೆ ಸಚಿವರ ವಕ್ತಾರರಾದ ಶಫಿವುಲ್ಲಾ ರಹೀಮಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಪರೀತ ಚಳಿಯಿಂದಾಗಿ ಅಫ್ಘಾನಿಸ್ತಾನದಲ್ಲಿ ಕಳೆದ 15 ವರ್ಷಗಳಲ್ಲೇ ಅತ್ಯಂತ ಶೀತಲವಾಗಿರುವ ಚಳಿಗಾಲ ಇದಾಗಿದ್ದು, ತಾಪಮಾನವು -34 ಡಿಗ್ರಿ ಸೆಲ್ಸಿಯಸ್ (-29.2 ಡಿಗ್ರಿ ಫ್ಯಾರನ್‌ಹೀಟ್) ಗಿಂತ ಕಡಿಮೆಯಾಗಿದೆ.ಜ.10 ರಿಂದ ಇದುವರೆಗೆ 162 ಮಂದಿ ಚಳಿಯಿಂದ ಮೃತಪಟ್ಟಿದ್ದಾರೆ. ಕಳೆದ ವಾರ 84 ಸಾವುಗಳು ಸಂಭವಿಸಿದೆ ಎಂದು ಹೇಳಿದ್ದಾರೆ.
ಗಡಗಡ ಮೈ ನಡುಗುವ ಚಳಿಗೆ ಜನ ಮನೆಯ ಆಚೇ ಬರೋದಕ್ಕೂ ಕಷ್ಟಪಡುವಂತಾಗಿದೆ ಮನೆಯ ಹೊರಬಂದು ಇಂಧನ ತೆಗೆದುಕೊಂಡು ಹೋಗಲು ಕೂಡ ಅಲ್ಲಿನ ಮಂದಿಗೆ ಸಾಧ್ಯವಾಗುತ್ತಿಲ್ಲ. ಇದು ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿರುವ ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಹೊಡೆತ ನೀಡಿದೆ. ಕಷ್ಟದಲ್ಲಿದ್ದ ಜನರಿಗೆ ನೆರವಾಗುವ ಎನ್ ಜಿಒಗಳು ತಾಲಿಬಾನ್ ಆಡಳಿತದಿಂದ ಮುಂದೆ ಬಂದು ಸಹಾಯ ಮಾಡಲು ಆಗುತ್ತಿಲ್ಲ.
ಮಹಿಳಾ ಎನ್ ಜಿಒ ಕಾರ್ಯಕರ್ತರು ಕೆಲಸ ಮಾಡುವಂತಿಲ್ಲ. ಜನ ಬಿಸಿಯ ತಾಪಮಾನಕ್ಕಾಗಿ ಇಂಧನ ಬಳಸಿ ಮೈ ಬಿಸಿ ಮಾಡಿಕೊಳ್ಳಬೇಕಿದೆ. ಮನೆಯ ಒಳಗೆ ಮಕ್ಕಳು ಚಳಿಯಲ್ಲಿ ನಡಗುತ್ತಿದ್ದಾರೆ. ಮಕ್ಕಳು ಚಳಿಯಿಂದ ರಾತ್ರಿ ಮಲಗುವುದೇ ಇಲ್ಲ. ಇಡೀ ದಿನ ಆಳುತ್ತಲೇ ಇರುತ್ತವೆ. ನಮಗೆ ಸಹಾಯ ಮಾಡಲು ಯಾರೂ ಬಂದಿಲ್ಲ. ಸರಿಯಾಗಿ ತಿನ್ನಲು ಆಹಾರವೂ ಇಲ್ಲ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಶೀತ ಚಳಿಗಾಳಿಯೂ ಆರೋಗ್ಯ ಸಮಸ್ಯೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ದಿನದಿಂದ ದಿನಕ್ಕೆ ರೋಗಗಳು ಉಲ್ಭಣ ಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೆಷ್ಟು ಚಳಿಗೆ ಬಲಿಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.