ಚಾಮರಾಜನಗರದಲ್ಲಿ ರೈತನ ಮೇಲೆ ಕಾಡಾನೆ ದಾಳಿ : ಎರಡು ಕಾಲಿಗೂ ಗಂಭೀರ ಗಾಯ
ಚಾಮರಾಜನಗರ : ಗೋಪಾಲಪುರ ಗ್ರಾಮದ ಜಮೀನಲ್ಲಿ ಬೆಳಿಗ್ಗಿನ ಜಾವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರೈತನ ಮೇಲೆ ಆನೆ ದಾಳಿ ನಡೆಸಿ,ಎರಡು ಕಾಲಿಗೂ ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಇತ್ತಿಚಿನ ದಿನಗಳ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಚಾಮರಾಜನಗರದಲ್ಲಿ ಜಮೀನಿನಲ್ಲಿ ಹಾಲು ಕರೆಯುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ರೈತ ಮಹದೇವಪ್ಪ ಎಂದು ಗುರುತಿಸಲಾಗಿದೆ.
ಆನೆದಾಳಿಗೆ ಗಾಯಗೊಂಡಿದ್ದ ಮಹದೇವಪ್ಪ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ದಾಖಲು ಮಾಡಲು ಹೇಳಿದ್ದಾರೆ. ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.