ಅಫ್ಘಾನಿಸ್ತಾನದಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ: ಭೀತಿಯಲ್ಲಿ ಜನ

ಅಫ್ಘಾನಿಸ್ತಾನದಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ: ಭೀತಿಯಲ್ಲಿ ಜನ

ಕಾಬೂಲ್:‌ ಟರ್ಕಿ ಹಾಗೂ ಸಿರಿಯಾದಲ್ಲಿ ಭೂಮಿ ಕಂಪಿಸಿದ ಬಳಿಕ ಜಗತ್ತಿನ ನಾನಾ ಕಡೆ ಭೂಕಂಪನದ ಅನುಭವಾಗುತ್ತಿದೆ. ಅಫ್ಘಾನಿಸ್ತಾನದ ಫೈಜಾಬಾದ್ ನಲ್ಲಿ ಸೋಮವಾರ ಮುಂಜಾನೆ ಭೂಕಂಪನ ಸಂಭವಿಸಿದೆ.

ಈಶಾನ್ಯ ನಗರವಾದ ಫೈಜಾಬಾದ್‌ನ ಆಗ್ನೇಯಕ್ಕೆ 100 ಕಿ.ಮೀ.

ನಲ್ಲಿ ಭೂಮಿ ಕಂಪಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿರುವ ಪ್ರಕಾರ ಬೆಳಿಗ್ಗೆ 6:47 ರ ಸುಮಾರಿಗೆ 135 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಪ್ರಮಾಣ ದಾಖಲಾಗಿದೆ.

ಸದ್ಯ ಯಾವುದೇ ರೀತಿಯ ಹಾನಿಯ ಬಗ್ಗೆ ವರದಿಯಾಗಿಲ್ಲ.

ಇದಕ್ಕೂ ಮುನ್ನ ಜನವರಿ 22 ರಂದು ಫೈಜಾಬಾದ್‌ನ ದಕ್ಷಿಣ-ಆಗ್ನೇಯ ಪ್ರದೇಶದಲ್ಲಿ ಭೂಕಂಪನ ಉಂಟಾಗಿತ್ತು.