DGCAʼಯ ನೂತನ ಮಹಾನಿರ್ದೇಶಕರಾಗಿ ʻವಿಕ್ರಮ್ ದೇವ್ ದತ್ʼ ನೇಮಕ

ನವದೆಹಲಿ: ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA)ದ ನೂತನ ಮಹಾನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ʻವಿಕ್ರಮ್ ದೇವ್ ದತ್(Vikram Dev Dutt)ʼ ಅವರು ನೇಮಕಗೊಂಡಿದ್ದಾರೆ.
ಸಂಪುಟದ ನೇಮಕಾತಿ ಸಮಿತಿಯು ಹಿರಿಯ ಐಎಎಸ್ ಅಧಿಕಾರಿ ವಿಕ್ರಮ್ ದೇವ್ ದತ್ ಅವರನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮುಂದಿನ ಮಹಾನಿರ್ದೇಶಕರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ.
AGMUT ಕೇಡರ್‌ನ 1993-ಬ್ಯಾಚ್ IAS ಅಧಿಕಾರಿಯಾಗಿರುವ ವಿಕ್ರಮ್ ದೇವ್ ದತ್ ಪ್ರಸ್ತುತ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (AIAHL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಡಿಜಿಸಿಎ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅರುಣ್ ಕುಮಾರ್ ಫೆಬ್ರವರಿ 28 ರಂದು ನಿವೃತ್ತರಾಗಲಿದ್ದು, ವಿಕ್ರಮ್ ಇವರ ಉತ್ತರಾಧಿಕಾರಿಯಾಗಲಿದ್ದಾರೆ.